Sandalwood: ಮಹಾಂತೇಷ್ ಅವರಿಗೆ ಹಲವು ಸಿನಿಮಾದಲ್ಲಿ ಜೂನಿಯರ್ ಕಲಾವಿದನಾಗಿ ಕೆಲಸ ಮಾಡಿದ್ದಾರೆ. ಅದರಿಂದ ಬಂದ ಹಣದಿಂದಲೇ ಜೀವನ ಮಾಡಿದ್ದಾರೆ.
ಕೆಲವು ಕಡೆ ಅವರಿಗೆ ಅವಕಾಶ ನೀಡುತ್ತೇನೆಂದು ಕರೆದು, ಕ್ಯಾರೆಕ್ಟರ್ ಇಲ್ಲಾ ಎಂದು ಹೇಳಿದ್ದೂ ಉಂಟು ಎಂದು ಮಹಾಂತೇಷ್ ನೆನಪಿಸಿಕ“ಂಡಿದ್ದಾರೆ. ಮಹಾಂತೇಷ್ ಅವರ ಜೀವನದಲ್ಲಿ ಹಲವು ಸಮಸ್ಯೆಗಳು ಬಂದಿದೆ. ಊಟಕ್ಕೆ, ಬಟ್ಟೆಗೆ, ಮನೆ ಬಾಡಿಗೆಗೆ ನೀಡಲು ಹಣವಿರಲಿಲ್ಲ. ಆದರೂ ಮಹಾಂತೇಷ್ ಧೃತಿಗೆಡದೇ, ಬಂದಿದ್ದನ್ನು ಎದುರಿಸಿದ್ದಾರೆ.
ಅಲ್ಲದೇ ಮಹಾಂತೇಷ್ ಏನೇ ಸಮಸ್ಯೆ ಬಂದರೂ ಅದನ್ನು ಬೇರೆಯವರ ಬಳಿ ಹೇಳುವುದಿಲ್ಲವಂತೆ. ಏಕೆಂದರೆ, ಬೇರೆಯವರು ನಮ್ಮ ಸಮಸ್ಯೆ ಬಗ್ಗೆ ಬೇರೆಯವರ ಬಳಿ ಹೇಳಬಹುದು. ಆದರೆ ಸಮಸ್ಯೆ ಬಗೆಹರಿಸುವುದಿಲ್ಲ. ಹಾಗಾಗಿ ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕ“ಳ್ಳುತ್ತಾರಂತೆ.
ಇನ್ನು ಮಹಾಂತೇಷ್ ಅವರಿಗೂ ಸಿನಿ ಪಯಣದಲ್ಲಿ ಹಲವು ಮೋಸಗಳಾಗಿದೆ. ಮನಸ್ಸಿಗೆ ಬೇಸರವೂ ಆಗಿದೆ. ಕರೆ ಮಾಡಿ ಶೂಟಿಂಗ್ ಇದೆ ಬನ್ನಿ ಎಂದು ಕಾಲ್ ಮಾಡಿ ಕರೆದು. ಅಲ್ಲಿ ಹೋದ ಬಳಿಕ ನಿಮಗೆ ಯಾವ ಕ್ಯಾರೆಕ್ಟರೂ ಇಲ್ಲ ಎಂದರು. ನಿರ್ದೇಶಕರು ಬರುವವರೆಗೂ ಅಂದ್ರೆ 7 ಗಂಟೆಗಳವರೆಗೂ ಕಾದಿದ್ದಕ್ಕೆ, ಜೂನಿಯರ್ ರೋಲ್ ಪ್ಲೇ ಮಾಡುವ ಅವಕಾಶ ನೀಡಿದ್ದರು. ಮೇನ್ ರೋಲ್ ಎಂದು ಕರೆದು, ಜೂನಿಯರ್ ರೋಲ್ ನೀಡಿದ್ದು ಬಹಳ ಬೇಸರವಾಯಿತು ಅಂತಾರೆ ಮಹಾಂತೇಷ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

