Monday, November 17, 2025

Latest Posts

ಗೆಳೆತನ ಕೆಲಸಕ್ಕೆ ಅನ್ವಯಿಸಲ್ಲ: ಶೆಟ್ರು ಗ್ಯಾಂಗ್ ಹೇಗೆ?: Niranjan Shetty Podcast

- Advertisement -

Sandalwood: ಸ್ಯಾಂಡಲ್‌ವುಡ್ ನಟ ನಿರಂಜನ್ ಶೆಟ್ಟಿ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಗೆಳೆತನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಮ್ಮ ಗೆಳೆಯ ಎಷ್ಟೇ ಕ್ಲೋಸ್ ಇದ್ದರೂ ಅವನ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ಜಲಸಿ ಅನ್ನೋದು ಇದ್ದೇ ಇರುತ್ತದೆ. ಅಪ್ಪಿತಪ್ಪಿ ನಿಮಗಿಂತ ಆತ ಸ್ವಲ್ಪ ಉದ್ಧಾರ ಆದರೂ ನಿಮ್ಮ ಮನಸ್ಸಿನಲ್ಲಿ ಅವನ ಬಗ್ಗೆ ಜಲಸ್ ಫೀಲ್ ಆಗೇ ಆಗತ್ತೆ ಅಂತಾರೆ ನಿರಂಜನ್.

ಆದರೆ ಆ ಜಲಸ್‌ನ್ನು ನಾವು ಪಾಸಿಟಿವ್ ಆಗಿ ತೋಗೋಳ್ಬೇಕು. ಆ ಕೆಲಸ ನನ್ನ ಕೈಯಲ್ಲೂ ಆಗತ್ತೆ ಎಂದು ನಾವು ಪ್ರಯತ್ನಿಸಿದರೆ, ನಾವೂ ಆ ಕೆಲಸದಲ್ಲಿ ಸಕ್ಸಸ್ ಆಗ್ತೀವಿ ಎಂದು ಹೇಳ್ತಾರೆ ನಿರಂಜನ್ ಶೆಟ್ಟಿ.

ಇನ್ನು ರಾಜ್‌ ಬಿ ಶೆಟ್ಟಿ ಬಳಿ ಶೆಟ್ರ ಗ್ಯಾಂಗ್ ಬಗ್ಗೆ ಕೇಳಿದಾಗ, ನಿಮ್ದೂ 1 ಗ್ಯಾಂಗ್ ಕಟ್ಕೋಳಿ ಬೇಡ ಅಂದವರ್ಯಾರು ಎಂದು ರಾಜ್ ಪ್ರಶ್ನಿಸಿದ್ದರು. ಈ ವಿಷಯದ ಬಗ್ಗೆ ಮಾತನಾಡಿರುವ ನಿರಂಜನ್ ಶೆಟ್ಟಿ, ಸಿನಿಮಾ ಿಂಡಸ್ಟ್ರಿಯಲ್ಲಿ ಕಾಶಿನಾಥ್, ಉಪೇಂದ್ರ ಇಲ್ಲಿಂದ ಹಿಡಿದು ಈಗಿನವರೆಗೂ ಹಲವು ಕಲಾವಿದರು ಮಂಗಳೂರು ಕಡೆಯವರು ಇದ್ದಾರೆ. ಶೆಟ್ಟಿ ಅನ್ನೋದು ಸರ್ ನೇಮ್. ಅದು ಟ್ಯಾಲೆಂಟ್ ಅಲ್ಲಾ. ಆದರೆ ಅದೇ ಸಮುದಾಯದಲ್ಲಿ ಎಲ್ಲಾ ಟ್ಯಾಲೆಂಟ್ ಸೇರಿದಾಗ 1 ಪ್ರಾಜೆಕ್ಟ್ ಆಗತ್ತೆ ಾಅಂತರೆ ನಿರಂಜನ್.

- Advertisement -

Latest Posts

Don't Miss