Sandalwood: ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅಣ್ಣಾವ್ರ ಜತೆಗೆ ಅವರು 1 ಸಿನಿಮಾ ಮಾಡಲಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ತಪ್ಪಿ ಹೋಯ್ತು ಅನ್ನೋ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಚಂದ್ರಶೇಖರ್ ಅವರು ಹೇಳುವುದೇನೆಂದರೆ, ನನಗೆ ಅಣ್ಣಾವ್ರ ಜತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಅವರ ಸುತ್ತಲಿರುವ 1 ಭದ್ರಕೋಟೆಯಿಂದ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಅದ್ಕಕೆ ನನ್ನ ಸಂಕೋಚದ ಸ್ವಭಾವವೂ ಕಾರಣವಾಗಿತ್ತು ಅಂತಾರೆ ನಾಗತೀಹಳ್ಳಿ ಚಂದ್ರಶೇಖರ್.
ಅಣ್ಣಾವ್ರಿಗೆ ನಾನು ಕರ್ಣನ ಬಗ್ಗೆ ಕಥೆ ಹೇಳುತ್ತಿದ್ದೆ. ಆದರೆ ಕಥೆ ಮುಕ್ತಾಯವಾಗುವ ವೇಳೆ ಹಲವರು ಬಂದು ಅಡ್ಡಿ ಮಾಡಿದರು. ಆ ಕಾರಣಕ್ಕೆ ಸಿನಿಮಾ ಮಾಡಲಾಗಲಿಲ್ಲ. ನನಗೆ ಅವರ ಜತೆ ಸಿನಿಮಾ ಮಾಡುವ ಅದೃಷ್ಟವಿರಲಿಲ್ಲ ಎಂದು ನಾಗತೀಹಳ್ಳಿ ಚಂದ್ರಶೇಖರ್ ಹೇಳುತ್ತಾರೆ. ಆದರೆ ಅಣ್ಣಾವ್ರು ನಮ್ಮ ಸಿನಿಮಾದಲ್ಲಿ ಹೂಮಳೆ ಎಂಬ ಹಾಡು ಹಾಡಿದ್ದರು. ಅದು ನಮಗೆ ಸಿಕ್ಕ ಭಾಗ್ಯ ಎಂದು ಹೇಳುತ್ತಾರೆ ನಿರ್ದೇಶಕರು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

