Thursday, December 4, 2025

Latest Posts

ರಶ್ಮಿಕಾ-ವಿಜಯ್‌ ರಾಯಲ್‌ ವೆಡ್ಡಿಂಗ್‌ : ಮದುವೆ ದಿನಾಂಕ ಹೊರಬಂದೇಬಿಡ್ತು

- Advertisement -

ಟಾಲಿವುಡ್‌ನ ಅತ್ಯಂತ ಫೇಮಸ್‌ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಕುರಿತು ಚರ್ಚೆ ಇದೀಗ ಗರಿಗೆದರುತ್ತಿದೆ. ಕಳೆದ ತಿಂಗಳು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಸ್ಟಾರ್ ಜೋಡಿ, ಫೆಬ್ರವರಿ 2026ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಇವರ ಮದುವೆ ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ಅರಮನೆಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಅಕ್ಟೋಬರ್ 3, 2025 ರಂದು ವಿಜಯ್ ಅವರ ಹೈದರಾಬಾದ್ ನಿವಾಸದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಆಪ್ತ ಮೂಲಗಳು ದೃಢಪಡಿಸಿವೆ. ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಮತ್ತು ಅತೀ ಆಪ್ತ ಸ್ನೇಹಿತರು ಮಾತ್ರ ಹಾಜರಿದ್ದರು. ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಮದುವೆ ಸ್ಥಳ ಮತ್ತು ದಿನಾಂಕದ ಕುರಿತ ಊಹಾಪೋಹಗಳು ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿವೆ.

ಇತ್ತೀಚೆಗೆ ರಶ್ಮಿಕಾ ತಮ್ಮ ಸಿನಿಮಾ ಥಾಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ನಿಶ್ಚಿತಾರ್ಥದ ಕುರಿತು ಕೇಳಲಾದ ಪ್ರಶ್ನೆಗೆ ನಗುಮುಖದಿಂದ ಪ್ರತಿಕ್ರಿಯಿಸಿ ಎಲ್ಲರಿಗೂ ಗೊತ್ತೇ ಇದೆ ಎಂದು ಹೇಳಿದ್ದರು. ಅವರ ಬೆರಳಿನಲ್ಲಿ ಕಾಣಿಸಿಕೊಂಡ ವಜ್ರದ ಉಂಗುರವು ನೆಟ್ಟಿಗರ ಗಮನ ಸೆಳೆದಿತ್ತು. ಅದೇ ವೇಳೆ ವಿಜಯ್ ದೇವರಕೊಂಡ ಅವರ ಕುಟುಂಬದೊಂದಿಗೆ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಬಾಬಾ ದರ್ಶನಕ್ಕೆ ಹೋದಾಗ, ರಶ್ಮಿಕಾ ಧರಿಸಿದ್ದ ಉಂಗುರವೂ ಅದೇ ಎಂದು ಅಭಿಮಾನಿಗಳು ಊಹಿಸಿದ್ದರು.

ರಶ್ಮಿಕಾ ಮತ್ತು ವಿಜಯ್ ಅವರ ಪ್ರೇಮಕಥೆ ‘ಗೀತಾ ಗೋವಿಂದಂ’ ಸಿನಿಮಾದ ಸೆಟ್‌ನಲ್ಲೇ ಆರಂಭವಾಯಿತು. ನಂತರ ಅವರು ಡಿಯರ್ ಕಾಮ್ರೇಡ್ ಚಿತ್ರದಲ್ಲೂ ಜೊತೆಯಾಗಿ ನಟಿಸಿ ತಮ್ಮ ಆನ್‌ಸ್ಕ್ರೀನ್ ಕನೆಕ್ಷನ್‌ನಿಂದ ಪ್ರೇಕ್ಷಕರ ಹೃದಯ ಗೆದ್ದರು. ಆ ಸಿನಿಮಾ ಅವರ ಆಫ್‌ಸ್ಕ್ರೀನ್ ಪ್ರೇಮದ ಪ್ರಾರಂಭಕ್ಕೆ ಕಾರಣವಾಯಿತೆಂಬ ಮಾತು ಕೇಳಿಬಂತು. ಈಗ, ಸುಮಾರು ಏಳು ವರ್ಷಗಳ ಬಳಿಕ, ಅವರ ಪ್ರೇಮಕಥೆ ವಿವಾಹದ ಮೂಲಕ ಸಂಪೂರ್ಣತೆಯತ್ತ ಸಾಗುತ್ತಿದೆ. ಟಾಲಿವುಡ್‌ನ ಈ ರಾಯಲ್ ಕಪಲ್ ಮದುವೆಗಾಗಿ ಅಭಿಮಾನಿಗಳು ಈಗಾಗಲೇ ದಿನ ಎಣಿಸುತ್ತಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss