Sandalwood: ನಟ ಮಹಾಂತೇಷ್ ಅವರು ಅರಸಯ್ಯನಪ್ರಸಂಗ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಹಿರೋಯಿನ್ ಹುಡುಕುವಾಗ ಆದ ಪೇಚಾಟದ ಬಗ್ಗೆ ವಿವರಿಸಿದ್ದಾರೆ.
ಅರಸಯ್ಯನ ಪ್ರಸಂಗ ನಿರ್ದೇಶಕ ಮಹಾಂತೇಷ್ ಅವರ ಗೆಳೆಯರಾಗಿದ್ದರು. ಹಾಗಾಗಿ ಮಾತಾಡ್ತಾ ಮಾತಾಡ್ತಾ ಇಲ್ಲಿ ಮೇನ್ ಪಾತ್ರ ಮಾಡಲು ಮಹಾಂತೇಷ್ ಅವರಿಗೆ ಹೇಳಿದರಂತೆ. ಆದರೆ ಇವರಿಗೆ 1 ಹಿರೋಯಿನ್ ತರಬೇಕು ಅನ್ನೋದೇ ಪೇಚಾಟವಾಗಿ ಹೋಯ್ತು.
ಬಳಿಕ ರಶ್ಮಿತಾ ಅವರನ್ನು ಸಂಪರ್ಕಿಸಿ, ಕಾಫಿ ಡೇನಲ್ಲಿ ಭೇಟಿಯಾದರಂತೆ. ಬಳಿಕ ಕಥೆ ಹೇಳಿದಾಗ ಅವರೂ ಓಕೆ ಅಂದರಂತೆ. ಆದರೆ ಹಿರೋ ಯಾರು ಎಂದು ಕೇಳಿದಾಗ, ಮಹಾಂತೇಷ್ ಅವರೇ ಅಂದಾಗ ಸ್ವಲ್ಪ ಆಶ್ಚರ್ಯವಾದ್ರೂ, ಓಕೆ ಎಂದು ಹೇಳಿದರಂತೆ. ಅಲ್ಲಿಗೆ ಹಿರೋಯಿನ್ ಓಕೆ ಆದ್ರು.
ಆದರೆ ಬರೀ ಹಿರೋ ಕೈಯನ್ನೇ ಹಿಡಿದು ರೂಢಿಯಾಗಿದ್ದ ಮಹಾಂತೇಷ್‌ಗೆ ರಶ್ಮಿತಾ ಕೈ ಹಿಡಿಯೋಕ್ಕೆ ಮೈ ನಡುಗುತ್ತಿತ್ತಂತೆ. ಬಳಿಕ ಹೇಗೋ ಮಾಡಿ ಸಿನಿಮಾ ಶೂಟಿಂಗ್ ಮುಗಿಸಿ, ರಿಲೀಸ್ ಆಗಿ, ಗೆದ್ದೇ ಬಿಟ್ಟ ಸಿನಿಮಾ ಅಂದ್ರೆ ಅದು ಅರಸಯ್ಯನ ಪ್ರೇಮ ಪ್ರಸಂಗ ಸಿನಿಮಾ. ಈ ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲಕಾರಿ ಕಥೆ ಹೇಳಿದ್ದಾರೆ ಮಹಾಂತೇಷ್. ಸಂದರ್ಶನಕ್ಕಾಗಿ ವೀಡಿಯೋ ನೋಡಿ.

