Sandalwood: ಅರಸಯ್ಯನ ಪ್ರೇಮ ಪ್ರಸಂಗ ಸಿನಿಮಾ ನಟ ಮಹಾಂತೇಷ್ ಅವರು ತಮ್ಮ ನೆಚ್ಚಿನ ಹಾಸ್ಯನಟ ಯಾರು ಅಂದಾಗ ಚಾರ್ಲಿ ಚಾಪ್ಲಿನ್ ಎಂದಿದ್ದಾರೆ. ಯಾಕೆ ಅವರೇ ಎಂದಿದ್ದಕ್ಕೂ ಅವರು ಉತ್ತರಿಸಿದ್ದಾರೆ.
ಕಾಮಿಡಿ ಮಾಡೋದು ಅಂದ್ರೆ ಬೇರೆಯವರನ್ನು ನಗಿಸೋದು. ಆದರೆ ಬೇರೆಯವರ ಕಾಲೆಳೆದು ತಮಾಷೆ ಮಾಡಿ ನಗಿಸೋದು ತಪ್ಪು. ಆದರೆ ಚಾರ್ಲಿ ತಮ್ಮ ಬಗ್ಗೆನೇ ತಮಾಷೆ ಮಾಡಿ ನಗಿಸುತ್ತಿದ್ದರು. ಬೇರೆಯವರ ಕಾಲೆಳೆದು ತಮಾಷೆ ಮಾಡಲಿಲ್ಲ. ಹಾಗಾಗಿ ನನಗೆ ಚಾರ್ಲಿ ಇಷ್ಟ ಅಂತಾರೆ ಮಹಾಂತೇಷ್.
ಅಲ್ಲದೇ ಮಹಾಂತೇಷ್ ಪಾತ್ರಗಳನ್ನು ಹೇಗೆ ಆಯ್ಕೆ ಮಾಡ್ತಾರೆ ಅಂದ್ರೆ, ಸ್ನೇಹ, ಸಂಬಂಧ, ಹಣ, ಪಾತ್ರ ಎಲ್ಲದಕ್ಕೂ ನಟನೆ ಮಾಡ್ತೀನಿ ಅಂತಾರೆ ಮಹಾಂತೇಷ್. ನಾಾನು ಬೆಂಗಳೂರಿನಲ್ಲಿ ಇರಬೇಕಾದ ಕಾರಣ, ಹಣಕ್ಕಾಗಿಯೂ ಪಾತ್ರ ಆಯ್ಕೆ ಮಾಡ್ತೇನೆ. ಕೆಲವು ಬಾರಿ ಸ್ನೇಹ ಸಂಬಂಧ ಉಳಿಸಲು ನಟಿಸುತ್ತೇನೆ. ಕೆಲವು ಬಾರಿ ಪಾತ್ರ ಚೆನ್ನಾಗಿರುತ್ತದೆ. ಹಾಗಾಗಿ ಹಣದ ಮುಖ ನೋಡದೇ, ಪಾತ್ರ ಮಾಡುತ್ತೇನೆ ಅಂತಾರೆ ಮಹಾಂತೇಷ್.
ಇನ್ನು ಮಹಾಂತೇಷ್ ಅವರ ಮದುವೆ ಬಗ್ಗೆ ಮಾತನಾಡಿದ್ದು, ಮದುವೆ ಡೇಟ್ ಫಿಕ್ಸ್ ಆದ ಬಳಿಕ. ಫೆಬ್ರವರಿಯಲ್ಲಿ ಮದುವೆ ಎಂದು ಜನವರಿಯಲ್ಲಿ ಎಲ್ಲ ನಿರ್ದೇಶಕರಿಗೆ ಡೇಟ್ ನೀಡಿದ್ದಾರೆ. ಆದರೆ ಮದುವೆ ದಿನಾಂಕ್ ಚೇಂಜ್ ಮಾಡಿ, ಜನವರಿಯಲ್ಲಿ ದಿನಾಂಕ ಫಿಕ್ಸ್ ಮಾಡಲಾಗಿದೆ. ಹಾಗಾಗಿ ಕೈವ ಸಿನಿಮಾನಲ್ಲಿ ಸ್ವಲ್ಪ ಬ್ರೇಕ್ ತೆಗೆದುಕ“ಂಡು ಊರಿಗೆ ಹೋಗಿ ಎಂಗೇಜ್‌ಮೆಂಟ್ ಆಗಿ, ಮರುದಿನ ಮದುವೆ ಆಗಿ, ಅದರ ಮರುದಿನವೇ ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿದ್ದರಂತೆ. ಹಾಗಾಗಿ ನನ್ನ ಜೀವನದಲ್ಲಿ ಮದುವೆ ಅನ್ನೋದು ಸರ್ಕ್ ಅಂತಾ ಪಾಸ್ ಆಯ್ತು ಅಂತಾರೆ ಮಹಾಂತೇಷ್

