Sandalwood: ನಟಿ ತನೀಷಾ ಕುಪ್ಪಂಡ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಬೋಲ್ಡ್ ಆಗಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ.
ನಟಿ ತನೀಷಾ ಅವರು ಬೋಲ್ಡ್ ಆಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಅವರಿಗೆ ಕೆಲವರು ಸಂದರ್ಶನ ಮಾಡುವಾಗ, ಇದನ್ನು ಮಾಡಿದ್ದಾರೆ, ಇದೇ ರೀತಿ ಬೇರೆ ರೀತಿಯ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ನಟಿಸುತ್ತೀರಾ ಅಂತಾ ಕೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ತನೀಷಾ, ಬೋಲ್ಡ್ನೆಸ್ ಅಂದ್ರೆ ಬರೀ ಬಟ್ಟೆ ಹಾಕೋದಲ್ಲ. ಬದಲಾಗಿ ಧೈರ್ಯವಾಗಿ ಮಾತನಾಡುವುದು ಕೂಡ ಬೋಲ್ಡ್ನೆಸ್.
ಇನ್ನು ಬೋಲ್ಡ್ ಕ್ಯಾರೆಕ್ಟರ್ಸ್ ಅಂತಾ ಬಂದಾಗ ನಾನು ಕೂಡ ಹಲವು ಬೋಲ್ಡ್ ಕ್ಯಾರೆಕ್ಟರ್ಸ್ ಮಾಡಿದ್ದೇನೆ. ನನಗೆ ಅಷ್ಟು ಧೈರ್ಯವಿದೆ ಅಂತಾರೆ ತನೀಷಾ. ಆದರೆ ಅದಕ್ಕೆ ಕಾಮೆಂಟ್ ಮಾಡುವವರು ಸಾವಿರಾರು ಜನರು ಸಿಕ್ತಾರೆ. ಅಂಥವರು ನಮಗೆ ಊಟ ಹಾಕಲ್ಲಾ, ಬಟ್ಟೆ ಕೋಡಿಸ್ತಾರಾ ಎಂದು ತನೀಷಾ ಪ್ರಶ್ನಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

