- Advertisement -
Mandya News: ಜಮೀನು ವಿಚಾರದಲ್ಲಿ ಬೇಸರವಾಗಿ ಡಿಸಿ ಕಚೇರಿ ಎಂದು ರೈತ ಮಂಜೇಗೌಡ ಆತ್ಮಹತ್ಯೆಯ ಘಟನೆ ಮಾಸುವ ಮುನ್ನವೇ, ಮಂಡ್ಯದಲ್ಲಿ ಇನ್ನೋರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾಳಕೆಂಪನ ದೊಡ್ಡಿ ಗ್ರಾಮದ ರೈತ ರಾಮಲಿಂಗ (55) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2 ಎಕರೆ ಜಮೀನು ಹೊಂದಿದ್ದ ರೈತ ಕೃಷಿಗಾಗಿ ಲಕ್ಷಾಂತರ ರೂ ಸಾಲ ಮಾಡಿದ್ದರು. 15 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲಾಗದೇ, ರೈತ ಮನನ“ಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮನೆಮಂದಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಕೂಡ, ಚಿಕಿತ್ಸೆ ಫಲಿಸದೇ ರೈತ ಸಾವನ್ನಪ್ಪಿದ್ದಾನೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈತನ ಸಾವಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
- Advertisement -

