Mandya Political News: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಾಯಕರು ಟವಲ್ ಹಾಕುತ್ತಿದ್ದು, ಒಬ್ಬರಾಾದ ಮೇಲೆ ಒಬ್ಬರು ದೆಹಲಿಗೆ ದೌಡಾಯಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ನಲ್ಲಿದ್ದ ಕೆಲ ನಾಯಕರೇ ನವೆಂಬರ್ ಕ್ರಾಂತಿ ಫಿಕ್ಸ್ ಅಂತಾ ಹೇಳಿರುವ ಬೆನ್ನಲ್ಲೆ, ನೂತನ ಸಿಎಂ ಆಗೋದಂತೂ ಖಚಿತ ಅಂತಾನೇ ಜನ ಮಾತಾಡ್ಕೋತಿದ್ದಾರೆ.
ಈ ಮಧ್ಯೆ ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಮಾನಿಯೋರ್ವ, ಸಚಿವರೇ ಮುಂದಿನ ಸಿಎಂ ಆಗಲಿ ಎಂದು ಹರಕೆ ಹೊತ್ತಿದ್ದಾರೆ. ಹರಿಕೆ ಹೊತ್ತು ಕುಟುಂಬದೊಂದಿಗೆ ತಿರುಪತಿಗೆ ಪಾದಯಾತ್ರೆ ಮಾಡಿದ್ದಾನೆ.
ನಾಗಮಂಗಲ ತಾಲೂಕಿನ ದೊಡ್ಡ ಚಿಕ್ಕನಹಳ್ಳಿ ಗ್ರಾಮದ ಆನಂದ ಎಂಬುವವರೇ ಸಚಿವ ಅಭಿಮಾನಿಯಾಗಿದ್ದು, ಅಪ್ಪಟ ಬೆಂಗಲಿಗನೂ ಹೌದು.
ಕೈಲಿ ಚಲುವರಾಯಸ್ವಾಮಿ ಫೋಟೋ ಹಿಡಿದುಕೊಂಡು ಕುಟುಂಬದೊಂದಿಗೆ ತಿರುಪತಿಗೆ ಪಾದಯಾತ್ರೆ ಮಾಡಿದ್ದು, ನಾನು ಅವರ ಅಪ್ಪಟ ಅಭಿಮಾನಿ ಅವರು ಒಮ್ಮೆ ಸಿಎಂ. ಆಗಿ ನೋಡಬೇಕು. ಆ ಕಾರಣಕ್ಕೆ ಹರಿಕೆ ಹೊತ್ತು ತಿರುಪತಿಗೆ ಕುಟುಂಬದ ಜೊತೆ ಪಾದಯಾತ್ರೆ ಹೋಗುತ್ತಿದ್ದೇನೆ. ಆ ದೇವರು ನನ್ನ ಬಯಕೆ ಈಡೇರಿಸುತ್ತಾನೆ ಎಂದು ಅಭಿಮಾನಿ ಹೇಳಿದ್ದಾರೆ.
ನಿನ್ನೆ ಕೂಡ ತುಮಕೂರಿನಲ್ಲಿ ಡಿಕೆಶಿ ಅಭಿಮಾನಿಗಳು ಡಿಕೆಶಿ ಮುಂದಿನ ಸಿಎಂ ಆಗಲಿ ಎಂದು ದೇವಿಗೆ ಹೋಮ ಹವನ ಪೂಜೆ ನೆರವೇರಿಸಿದ್ದಾರೆ. ಅಭಿಮಾನಿಗಳ ಈ ಸ್ಪರ್ಧೆಯಲ್ಲಿ ಅದ್ಯಾವ ನಾಯಕನಿಗೆ ಸಿಎಂ ಕುರ್ಚಿ ಸಿಗತ್ತೋ..? ಅಥವಾ ಸಿದ್ದರಾಮಯ್ಯನವರೇ ಮುಂದುವರಿತಾರೋ ಅಂತಾ ಕಾದು ನೋಡಬೇಕಿದೆ.

