ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂಗು ವಿಧಾನಸೌಧದಲ್ಲಿ ಸಾಲು, ಸಾಲು ಸಭೆ ನಡೀತು. ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗಿನ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರತಿ ಟನ್‌ಗೆ ನೀಡುವ 3300 ರೂಪಾಯಿಯಲ್ಲಿ, ಕಾರ್ಖಾನೆಯಿಂದ 3,250 ರೂ. ನೀಡಬೇಕು. ಉಳಿದ ಹಣವನ್ನು ಸರ್ಕಾರದಿಂದ 50 ರೂಪಾಯಿ ಸಬ್ಸಿಡಿ ನೀಡಲು ನಿರ್ಧಾರ ಮಾಡಲಾಗಿದೆ. ಕೊನೆಗೂ ಅನ್ನದಾತರ ಹೋರಾಟದ ಎದುರು ಸರ್ಕಾರ ಮಂಡಿಯೂರಿದೆ. ಆದೇಶ ಹೊರಬೀಳುತ್ತಿದ್ದಂತೆ ರೈತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಪ್ರತಿಭಟನೆ ಕೈಬಿಡಲು ಒಪ್ಪಿಕೊಂಡಿದ್ದಾರೆ. 9 ದಿನಗಳ ಹೋರಾಟಕ್ಕೆ ಅಂತಿಮವಾಗಿ ಜಯ ಸಿಕ್ಕಿದೆ.
ಕಬ್ಬಿನ ದರ ನಿಗದಿ ಬಗ್ಗೆ ಕಾರ್ಖಾನೆ ಮಾಲೀಕರ ಜೊತೆ ಬೆಳ್ಗೆಯಿಂದಲೂ ನಿರಂತರ ಸಭೆ ನಡೆಸಲಾಗಿತ್ತು. ಮೊದಲ ಸಭೆ ವಿಫಲವಾಗಿದ್ದು, 2ನೇ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು, ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯುಲು ಮತ್ತು ಕಾರ್ಖಾನೆ ವಿದ್ಯುತ್ ತೆರಿಗೆ ಕಡಿಮೆ ಮಾಡುವ ವಿಚಾರವಾಗಿ ಚರ್ಚಿಸಲು, ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಗಿದೆ.
ಮತ್ತೊಂದು ಪ್ರಮುಖ ವಿಷಯ ಅಂದ್ರೆ, ಸದ್ಯ ನಿಗದಿಪಡಿಸಿರುವ ಕಬ್ಬಿನ ದರವನ್ನು, ಇಡೀ ರಾಜ್ಯಕ್ಕೆ ಅನ್ವಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

