Political News: ದೆಹಲಿಯಲ್ಲಿ ನಡೆದಿರುವ ಸ್ಪೋಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಮುಸಲ್ಮಾನರು ಭಯೋತ್ಪಾದನೆಯತ್ತ ಆಕರ್ಷಿತರಾಗಲು ಬಡತನ, ನಿರುದ್ಯೋಗವಲ್ಲ, ಅವರ ಮನಸ್ಥಿತಿ ಮತ್ತು ಧರ್ಮಾಂಧತೆಯೇ ಕಾರಣ ಎಂದಿದ್ದಾರೆ.
ಭಾರತದಲ್ಲಿ ಮುಸ್ಲಿಂಮರ ಪರಿಸ್ಥಿತಿ ಸರಿ ಇಲ್ಲಾ. ಬಡತನದಿಂದ ಜೀವನ ಮಾಡಬೇಕು. ಸಣ್ಣ ಸಣ್ಣ ದುಡಿಮೆ ಮಾಡಬೇಕು. ಇದೇ ಬಡತನದಿಂದಾಗಿ ಅವರು ಭಯೋತ್ಪಾದನೆಗೆ ಆಕರ್ಷಿತರಾಗುತ್ತಿದ್ದಾರೆ ಅಂತ ಪ್ರತೀ ಸಲ ನಮಗೆ ಕಥೆ ಹೇಳೋರು, ಈಗ ಸಿಕ್ಕಿರು 5 ಭಯೋತ್ಪಾದವರು ವೈದ್ಯರು.. ಈಗೇನು ಕಥೆ ಹೇಳ್ತೀರಾ ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದ್ರೆ ಈ ದೇಶದಲ್ಲಿ ಮುಸಲ್ಮಾನರಿಗೆ ಇರುವ ಸಮಸ್ಯೆ ಅಂದ್ರೆ ಅದು ಬಡತನ ಅಲ್ಲ. ಅವರ ಮನಸ್ಥಿತಿ ಮತ್ತು ಅವರಲ್ಲಿರುವ ಧರ್ಮಾಂಧತೆಯೇ ಇದಕ್ಕೆ ಕಾರಣ ಅಂತಾ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ನಿರುದ್ಯೋಗವೋ, ಬಡತನವೋ ನಮ್ಮ ದೇಶವನ್ನು ಕಾಡುತ್ತಿಲ್ಲ. ಬದಲಾಗಿ ಈ ಧರ್ಮಾಂಧತೆ ಮತ್ತು ಮನಸ್ಥಿತಿಯೇ ಪಿಡುಗಾಗಿ ನಮ್ಮ ದೇಶವನ್ನು ಕಾಡುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ವಿದ್ಯೆ ಪಡೆದು ವೈದ್ಯರಾಗಿರುವ ಜನ ದೇಶಕ್ಕೆ ಬಾಂಬ್ ಇಡುತ್ತಾರೆಂದರೆ, ಯೋಚನೆ ಮಾಡಿ. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ, ಪ್ರಪಂಚದಲ್ಲಿ ನಡೆಯುವ ಭಯೋತ್ಪಾಕದ ಕೃತ್ಯಗಳಿಗೆ ಬೆಂಬಲಿಸಿ, ಮೇಲ್ ಕಳುಹಿಸುತ್ತಿದ್ದವನು ಗೂಗಲ್ ಎಂಪ್ಲಾಯ್ ಆಗಿದ್ದವನು. ಇಂಥವರೆಲ್ಲ ಇಲ್ಲೇ ಅನ್ನ ತಿದು ಬೇರೆ ಕಡೆ ನಿಷ್ಠೆಯನ್ನು ಇರಿಸಿಕ“ಂಡವರು ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಇತ್ತೀಚೆಗೆ ವಿದ್ಯಾವಂತರೇ ಇಂಥ ಕೆಲಸಗಳನ್ನು ಮಾಡುತ್ತಿದ್ದಾರೆ. ನಿಮ್ಮ ಸುತ್ತಮುತ್ತಲಿರುವವರನ್ನು ಕೂಡ ನೀವು ನಂಬಬೇಡಿ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.

