Thursday, November 13, 2025

Latest Posts

Spiritual: ಉಪವಾಸ ಅಂದರೇನು..? ಉಪವಾಸ ಮಾಡುವಾಗ ನಾವು ಅನುಸರಿಸಬೇಕಾದ ಪದ್ಧತಿಗಳೇನು..?

- Advertisement -

Spiritual: ಉಪವಾಸ ಅನ್ನೋದು 1 ಧಾರ್ಮಿಕ ಪದ್ಧತಿ. ಎಲ್ಲ ಧರ್ಮದಲ್ಲೂ ಉಪವಾಸವಿದೆ. ಹಿಂದೂಗಳು ಏಕಾದಶಿ, ಸಂಕಷ್ಟಿ ಅಥವಾ ಯಾವುದಾದರೂ ದಿನ ಉಪವಾಸ ಮಾಡುತ್ತಾರೆ. ಮುಸ್ಲಿಂರು ರಂಜಾನ್ ದಿನ ಉಪವಾಸ ಮಾಡುತ್ತಾರೆ. ಕ್ರಿಶ್ಚಿಯನ್ನರು ಗುಡ್‌ಫ್ರೈಡೆ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಹಾಗಾದರೆ ಉಪವಾಸ ಏಕೆ ಮಾಡೋದು. ಹಿಂದೂಗಳು ಉಪವಾಸ ಮಾಡುವಾಗ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಉಪವಾಸ ಮಾಡುವಾಗ ಬೇರೆ ಯೋಚನೆ ಇರಬಾರದು: ಉಪವಾಸ ಮಾಡುವಾಗ, ನಮ್ಮ ತಲೆಯಲ್ಲಿ ದೇವರ ಬಗೆಗಿನ ಯೋಚನೆ, ಧ್ಯಾನ ಮಾತ್ರ ಇರಬೇಕು. ನೀವು ಉಪವಾಸ ಮಾಡಿ, ಮನಸ್ಸಿನಲ್ಲಿ ರುಚಿ ರುಚಿ ತಿಂಡಿಯ ಯೋಚನೆ ಮಾಡಿದರೆ, ಆ ಉಪವಾಸದ ಪ್ರಯೋಜನವಾಗುವುದಿಲ್ಲ.

ಉಪವಾಸ ಯಾಕೆ ಮಾಡಲಾಗುತ್ತದೆ.?: ಉಪವಾಸ ಮಾಡುವುದರಿಂದ ನಿಮ್ಮ ದೇಹ ಶುದ್ಧವಾಗುತ್ತದೆ. ನಾವು ಪ್ರತಿದಿನ ತಿನ್ನುತ್ತಲೇ ಇರುತ್ತೇವೆ. ಹಾಗಾಗಿ ನಮ್ಮ ದೇಹ 1 ಯಂತ್ರದಲ್ಲೇ ಪ್ರತಿದಿನ ಕೆಲಸ ಮಾಡುತ್ತಲೇ ಇರುತ್ತದೆ. ಆದರೆ 1 ದಿನ ನೀವು ಸ್ವಲ್ಪ ಸಮಯದ ಉಪವಾಸ ಮಾಡಿದರೂ, ಅಥವಾ ಬರೀ ನೀರುಕುಡಿದು ಉಪವಾಸ ಮಾಡಿದರೆ, ನಿಮ್ಮ ದೇಹ ವಿಷಕಾರಿ ವಸ್ತುಗಳನ್ನು ಆಚೆ ಹಾಕಲು ಸಹಾಯವಾಗುತ್ತದೆ. ಆದರೆ ನಿಮ್ಮ ಆರೋಗ್ಯವನ್ನು ಪರೀಕ್ಷಿ, ಉಪವಾಸ ಮಾಡಬೇಕು.

ಉಪವಾಸ ಮಾಡುವಾಗ ಏನೆಲ್ಲ ಮಾಡಬೇಕು..?: ಉಪವಾಸ ಮಾಡುವಾಗ ನೀವು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಪೂಜೆ ಮಾಡಿ, ಶುದ್ಧವಾದ ಉಡುಪು ಧರಿಸಬೇಕು. ಉಪವಾಸ ಬರಿ ಉದರಕ್ಕಲ್ಲ. ನಮ್ಮ ಬಾಯಿಗೂ ಇರಬೇಕು. ಈ ವೇಳೆ ಉತ್ತಮವಾದ ಮಾತನ್ನೇ ಆಡಬೇಕು. ಮನಸ್ಸಿನಲ್ಲಿ ಇತರರ ಬಗ್ಗೆ ಬೇಡದ ಯೋಚನೆಗಳನ್ನು ಮಾಡಬಾರದು.

- Advertisement -

Latest Posts

Don't Miss