ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಮತ್ತೆ ಏರಿಕೆಯ ಹಾದಿ ಹಿಡಿದಿವೆ. ವಿಶೇಷವಾಗಿ ಬೆಳ್ಳಿ ಬೆಲೆಗಳಲ್ಲಿ ಒಂದೇ ದಿನದಲ್ಲಿ ಭಾರಿ ಜಿಗಿತ ಕಂಡುಬಂದಿದೆ.
ಇಂದು 22 ಕ್ಯಾರಟ್ ಚಿನ್ನದ ಬೆಲೆ 11,505 ರೂಪಾಯಿಯಿಂದ 11,715 ರೂಗೆ ಏರಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 12,780 ರೂ ಆಗಿದೆ. ಬೆಳ್ಳಿ ಬೆಲೆಯಂತೂ ಒಂದೇ ದಿನಕ್ಕೆ ಪ್ರತಿ ಗ್ರಾಂಗೆ 10 ರೂಪಾಯಿಗಳಷ್ಟು ಜಿಗಿತ ಕಂಡಿದೆ. ನಿನ್ನೆಗಿಂತ ಎರಡು ಪಟ್ಟು ವೇಗದಲ್ಲಿ ಬೆಲೆ ಏರಿಕೆಯಾಗಿದೆ.
ಮುಂಬೈ ಮತ್ತು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 162 ರೂಪಾಯಿಯಿಂದ 172 ರೂಪಾಯಿಗೆ, ಚೆನ್ನೈ ಸೇರಿದಂತೆ ದಕ್ಷಿಣ ಭಾರತದ ಕೆಲವು ನಗರಗಳಲ್ಲಿ 182 ರೂಪಾಯಿಗೆ ಏರಿಕೆಯಾಗಿದೆ. ಚಿನ್ನದ ದರವು ಕೂಡ ಸತತ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಗುರುವಾರ ಚಿನ್ನದ ದರದಲ್ಲಿ 210 ರೂಗಳಷ್ಟು ಏರಿಕೆ ದಾಖಲಾಗಿದೆ. ಆಭರಣ ಚಿನ್ನದ ಬೆಲೆ ₹11,700 ಗಡಿ ದಾಟಿದೆ.
ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ ₹12,800 ರೂ ಗಡಿಯತ್ತ ಸಾಗುತ್ತಿದೆ.
ಭಾರತದಲ್ಲಿ ಸದ್ಯ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ ₹1,17,150. 10 ಗ್ರಾಂ ನ 24 ಕ್ಯಾರಟ್ ಚಿನ್ನದ ಬೆಲೆ ₹1,27,800. 100 ಗ್ರಾಂ ಬೆಳ್ಳಿ ಬೆಲೆ ₹17,200. ಬೆಂಗಳೂರು ನಗರದಲ್ಲಿಯೂ ಇದೇ ದರ ಮುಂದುವರಿದಿದೆ. 10 ಗ್ರಾಂ ಚಿನ್ನದ ದರ ₹1,17,150. 100 ಗ್ರಾಂ ಬೆಳ್ಳಿ ದರ ₹17,200. ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ಬೆಲೆ ₹18,200 ತಲುಪಿದೆ.
ಇಲ್ಲಿ ನೀಡಿರುವ ಚಿನ್ನ ಮತ್ತು ಬೆಳ್ಳಿ ದರಗಳು ಪ್ರಮುಖ ಅಭರಣದ ಅಂಗಡಿಗಳಿಂದ ಶೇಖರಿಸಿದ ಅಂದಾಜು ದರಗಳು ಮಾತ್ರ. ನಿಖರ ಬೆಲೆ ಪ್ರತಿ ನಗರದಲ್ಲೂ ವಿಭಿನ್ನವಾಗಿರಬಹುದು. ಇದರೊಂದಿಗೆ ಜಿಎಸ್ಟಿ, ಮೇಕಿಂಗ್ ಚಾರ್ಜ್ ಮತ್ತು ಇತರ ಶುಲ್ಕಗಳು ಪ್ರತ್ಯೇಕವಾಗಿ ವಿಧಿಸಲಾಗುತ್ತವೆ. ಏನೇ ಅಂದ್ರು ಕೂಡ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗ್ತಾಯಿರೋದು ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ.
ವರದಿ : ಲಾವಣ್ಯ ಅನಿಗೋಳ

