Mandya News: ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತೆ ನಡೆಯುತ್ತಿರುವ ಜನಾಂದೋಲನವು ನ.15 ರಿಂದ ಡಿ.15 ವರೆಗೆ ಮಂಡ್ಯ ಜಿಲ್ಲಾದ್ಯಂತ ನಡೆಸಲಾಗುವುದು ಎಂದು ಸಿಪಿಐ(ಎಂ) ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ 5 ನೇ ಹಂತದಲ್ಲಿ ಕಾವೇರಿ ನೀರು ಕೊಂಡೊಯ್ಯುವುದು ವಿರೋಧಿಸಿ, 9..5 ಸಕ್ಕರೆ ಇಳುವರಿಯ ಟನ್ ಕಬ್ಬಿಗೆ 5500 ಬೆಲೆ ನಿಗದಿ, ಉದ್ಯೋಗ ಖಾತರಿಯಡಿ 200 ದಿನ ಕೆಲಸ, ದಿನಕ್ಕೆ 600 ರೂ ಕನಿಷ್ಠ ಕೂಲಿ ಸೇರಿ 21 ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಜನಾಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಜನಾಂದೋನದ ಭಾಗವಾಗಿ ಜಿಲ್ಲೆಯ ಮನೆ ಮನೆಗಳಿಗೆ ತೆರಳಿ, ಸಿಪಿಐ(ಎಂ)ನ ಜನಪರ ಆಡಳಿತ, ಕೇರಳ ರಾಜ್ಯದಲ್ಲಿ ಬಡತನ ನಿರ್ಮೂಲನೆ ಮಾಡಿದ ಸಾಧನೆಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋದಿ ನೀತಿಗಳಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಅಂತೆಯೇ ಡಿ.21 ರಂದು ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ನಡೆಯಲಿದ್ದು, ಎಲ್ಲಾ 21 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು. ಈ ಸಭೆಗೆ ಜಿಲ್ಲೆಯಿಂದ 5 ಸಾವಿರ ಮಂದಿ ಭಾಗವಹಿಸಲಾಗುವುದು ಎಂದರು.




