Political News: ಬಿಹಾರ ಚುನಾವಣೆಯ ಫಲಿತಾಂಶ ಬಂದಿದ್ದು, ಎನ್‌ಡಿಎ ಮುನ್ನಡೆ ಸಾಧಿಸಿದ್ದು, ಉಳಿದೆಲ್ಲ ಪಕ್ಷಗಳು ಹಿಂದುಳಿದೆ. ಕಾಂಗ್ರೆಸ್ ಅತ್ಯಂತ ಕಡಿಮೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸೋಲಿನತ್ತ ಹೋಗಿದೆ.
ಇದೀಗ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಬಿಹಾರ ಚುನಾವಣೆಯಲ್ಲಿ ಸೋಲನ್ನಪ್ಪಿದ ಕಾಂಗ್ರೆಸ್ ಕಾಲೆಳೆದು ಎಕ್ಸ್ ಖಾತೆಯಲ್ಲಿ ವ್ಯಂಗ್ಯವಾಡಿದ್ದಾರೆ. ತಮ್ಮ ಶತಮಾನದ ಚುನಾವಣಾ ಸೋಲುಗಳತ್ತ ಹೆಮ್ಮೆಯಿಂದ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿಗೆ ಅಭಿನಂದನೆಗಳು ಎಂದು ಅಶೋಕ್ ಹೇಳಿದ್ದಾರೆ.
ನೀವು ಬಹುಶಃ ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಬಹುದು, ಆದರೆ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಸೋತ ಚುನಾವಣೆಗಳ ಸಂಖ್ಯೆಯನ್ನು ಎಣಿಸುವುದು ಬಹುತೇಕ ಅಸಾಧ್ಯ. “ಜಂಗಲ್ ರಾಜ್” ಗೆ ಹೆಸರುವಾಸಿಯಾದ ಆರ್‌ಜೆಡಿ-ಕಾಂಗ್ರೆಸ್ ಮಹಾಘಟಬಂಧನ್, ಗೌರವಾನ್ವಿತ ಶ್ರೀ ನಿತೀಶ್ ಕುಮಾರ್
ನೇತೃತ್ವದ ಎನ್‌ಡಿಎ ಸರ್ಕಾರವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಬಿಹಾರದ ಜನರಿಗೆ ಚೆನ್ನಾಗಿ ತಿಳಿದಿತ್ತು ಎಂದು ಅಶೋಕ್ ಬರೆದಿದ್ದಾರೆ.
ಇನ್ನು ಅನಿವಾರ್ಯ ಸೋಲನ್ನು ಗ್ರಹಿಸಿದ ರಾಹುಲ್ ಗಾಂಧಿ ಮತ್ತೊಮ್ಮೆ “ಮತ ಚೋರಿ” ಎಂಬ ಹೊಸ ಕಾಲ್ಪನಿಕ ಕಥೆಯನ್ನು ತೇಲಿಸುವ ಮೂಲಕ ಮುಜುಗರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಬಿಹಾರದ ಬುದ್ಧಿವಂತ ಮತದಾರರು ಈ ನಾಟಕವನ್ನು ಅರ್ಥಮಾಡಿಕೊಂಡರು. ಅವರು ಕಾಂಗ್ರೆಸ್ ಪಕ್ಷದ “ಮತ ಕಳ್ಳತನ” ನಾಟಕೀಯತೆಯನ್ನು ನಿರ್ಣಾಯಕವಾಗಿ ತಿರಸ್ಕರಿಸಿದರು ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ
ಮತ್ತು ಶ್ರೀ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಮತ್ತೊಮ್ಮೆ ನಂಬಿಕೆ ಇಟ್ಟರು ಎಂದು ಅಶೋಕ್ ಹೇಳಿದ್ದಾರೆ.
ಹರಿಯಾಣ, ಮಹಾರಾಷ್ಟ್ರ ಮತ್ತು ಈಗ ಬಿಹಾರದಲ್ಲಿ ನಡೆದಿರುವುದು ಕಾಂಗ್ರೆಸ್‌ಗೆ ಸ್ಪಷ್ಟ ಎಚ್ಚರಿಕೆಯಾಗಿದೆ. ಈಗಾಗಲೇ ಸಾರ್ವಜನಿಕ ವಿಶ್ವಾಸ ಕಳೆದುಕೊಂಡಿರುವ ಪಕ್ಷವು ಶೀಘ್ರದಲ್ಲೇ ಇಲ್ಲಿಯೂ ಸಂಪೂರ್ಣ ಮತ್ತು ಖಚಿತವಾದ ನಾಶ ಎಂದುರಿಸಲಿದೆ ಎಂದು ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.


