Saturday, November 15, 2025

Latest Posts

News: ಹಳದಿ ಬಂಗಾರಕ್ಕಿಂತ ನೀಲಿ ಬಂಗಾರವಾದ ನೀರಿಗೆ ಹೆಚ್ಚು ಮಹತ್ವ: ಪತ್ರಕರ್ತ ಹಮೀದ್ ಪಾಳ್ಯ

- Advertisement -

News: ಜಲಸಂಪನ್ಮೂಲ ಇಲಾಖೆಯ ವತಿಯಿಂದ ಇಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ರಚಿಸಿದ “ನೀರಿನ ಹೆಜ್ಜೆ” ಕೃತಿಯನ್ನು ನಾಡಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅನೇಕ ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿರುವ ಹಿರಿಯ ಪತ್ರಕರ್ತ ಹಮೀದ್ ಪಾಳ್ಯ, ಹಳದಿ ಬಂಗಾರಕ್ಕಿಂತ ನೀಲಿ ಬಂಗಾರ ಅಂದ್ರೆ ನೀರಿಗೆ ಹೆಚ್ಚು ಮಹತ್ವವಿದೆ ಎಂದು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃತಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ನೀರಿನ ಮಹತ್ವವನ್ನು ವಿವರಿಸುವ ಇಷ್ಟು ಉತ್ತಮ ಕೃತಿ ಇದುವರೆಗೂ ಬಿಡುಗಡೆಯಾಗಿರಲಿಲ್ಲ. ಇದು ಅಧ್ಯಯನಾರ್ಹ ಮತ್ತು ಸಂಗ್ರಹಯೋಗ್ಯ ಕೃತಿ ಎಂದು ಹಮೀದ್ ಪಾಳ್ಯ ಹೇಳಿದ್ದಾರೆ.

ಹಿಂದೆ ಜಾನ್ ಎಫ್ ಕೆನಡಿಯವರು, ಮುಂದಿನ ದಿನಗಳಲ್ಲಿ ನೀರಿನ ಸಂಘರ್ಷದಿಂದ ಯುದ್ಧಗಳು ನಡೆದರೆ ಅದನ್ನು ತಡೆದು ಶಾಂತಿ ಸ್ಥಾಪಿಸುವವರಿಗೆ ಮತ್ತು ಜಲತಜ್ಞರಿಗೆ ನೋಬೆಲ್ ಪ್ರಶಸ್ತಿ ನೀಡಬೇಕೆಂದು ಹೇಳಿದ್ದರು. ನೀರಿಗೆ ಅಷ್ಟು ಮಹತ್ವವಿದೆ ಎಂದು ಹಮೀದ್ ಪಾಳ್ಯ ಹೇಳಿದ್ದಾರೆ.

ಈ ಕೃತಿಯಲ್ಲಿ ಕೇವಲ ರಾಜ್ಯದ ಜಲ ಸಂಪನ್ಮೂಲದ ಬಗ್ಗೆ ಮಾತ್ರವಲ್ಲದೇ, ದೇಶ ಅಂತರಾಷ್ಟ್‌ರೀಯ ಮಟ್ಟದ ಎಲ್ಲಾ ಪ್ರಮುಖ ಜಲಾಶಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅದರ ಐತಿಹಾಸಿಕ ಪೌರಾಣಿಕ ಹಿನ್ನೆಲೆಗಳ ಬಗ್ಗೆ ಉಲ್ಲೇಖವಿದೆ ಎಂದು ಹಮೀದ್ ಪಾಳ್ಯ ಹೇಳಿದ್ದಾರೆ.

ಜ್ಞಾನದ ಹೆಬ್ಬಾಗಿಲು ಕಿವಿ ಎಂಬ ಮಾತಿದೆ. ಯಾರು ಎಲ್ಲಾ ವಿಚಾರಗಳಿಗೂ ಕಿವಿಯಾಗುತ್ತಾರೋ, ಅವರು ಎಲ್ಲಾ ವಿಷಯಗಳನ್ನು ತಿಳಿದು, ಅದರ ಬಗ್ಗೆ ಬೇರೆಯವರಿಗೆ ಹೇಳಲು ಸಾಧ್ಯ. ಡಿ.ಕೆ.ಶಿವಕುಮಾರ್ ಅವರು ಎಲ್ಲಾ 4 ನಿಗಮ ನೀರಾವರಿ ಅಧಿಕಾರಿಗಳು, ವಿಷಯ ಪರಿಣಿತರು, ತಂತ್ರಜ್ಞರು ಮುಂತಾದವರ ಜತೆ ಚರ್ಚಿಸಿ, ಪ್ರಶ್ನಿಸಿ, ಅವರಿಂದ ತಿಳಿದು ಈ ಕೃತಿ ರಚಿಸಿದ್ದಾರೆ ಎಂದು ಹಮೀದ್ ಪಾಳ್ಯ ಹೇಳಿದ್ದಾರೆ.

ರಾಜ್ಯ ರಾಜಕಾರಣಗಳ ಸದ್ದು ಗದ್ದಲದ ಮಧ್ಯೆಯೂ ಡಿ.ಕೆ.ಶಿವಕುಮಾರ್ ಸಮಯ ಮಾಡಿ ಇಂಥ ಕೃತಿ ರಚಿಸಿರುವುದು ನಿಿಜಕ್ಕೂ ಪ್ರಶಂಸನಾರ್ಹ ಎಂದು ಹಮೀದ್ ಪಳ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss