ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ನಮ್ಮ ಪ್ರತಿದಿನದ ಅಭ್ಯಾಸ. ಆದರೆ ನಾವು ಬಳಸುವ ಟೂತ್‌ಪೇಸ್ಟ್ ಪ್ರಮಾಣ ಸರಿನಾ ಅಂತ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ,ಜಾಹೀರಾತುಗಳಲ್ಲಿ ಬ್ರಷ್ ಮೇಲೆ ಪೇಸ್ಟ್ ಅನ್ನು ತುಂಬಾ ಹಾಕುವುದನ್ನು ತೋರಿಸುತ್ತಾರೆ. ಆದರೆ ನಿಜವಾಗಿ ಅದು ಅಗತ್ಯವಿಲ್ಲ. ಹಲ್ಲು ಸ್ವಚ್ಛವಾಗೋದು ಪೇಸ್ಟ್‌ನ ಪ್ರಮಾಣದಿಂದ ಅಲ್ಲ – ನಾವು ಹೇಗೆ ಹಲ್ಲುಜ್ಜುತ್ತೇವೆ ಎಂಬುದರಿಂದ. ತಪ್ಪಾದ ಪ್ರಮಾಣ ಬಳಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಅಂತ ವೈದ್ಯರು ತಿಳಿಸುತ್ತಾರೆ..
ಮಕ್ಕಳ(Dental Health ) ಡೆಂಟಲ್ ಆರೋಗ್ಯದಲ್ಲಿ ಹೆಚ್ಚಿನ ಫ್ಲೋರೈಡ್ ಅಪಾಯಕಾರಿ. ಚಿಕ್ಕ ಮಕ್ಕಳಿಗೆ ಟೂತ್‌ಪೇಸ್ಟ್ ನುಂಗುವ ಸಾಧ್ಯತೆ ಹೆಚ್ಚಿರುವುದರಿಂದ, ಫ್ಲೋರೈಡ್ ಅಧಿಕವಾದರೆ ಹಲ್ಲಿನಲ್ಲಿ ಬಿಳಿ ಚುಕ್ಕೆಗಳು ಕಾಣಿಸುವ ಫ್ಲೋರೋಸಿಸ್ ಉಂಟಾಗಬಹುದು. ಆದ್ದರಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ಅಕ್ಕಿ ಗಾತ್ರದ ಪೇಸ್ಟ್ ಸಾಕು. ಮೂರು ವರ್ಷ ದಾಟಿದ ನಂತರ, ಉಗುಳಲು ಕಲಿತ ಮೇಲೆ ಬಟಾಣಿ ಗಾತ್ರದ ಪೇಸ್ಟ್ ಬಳಸಬಹುದು.
ವಯಸ್ಕರು ಸಹ, ಇಡೀ ಬ್ರಷ್ ತುಂಬುವಷ್ಟು ಟೂತ್‌ಪೇಸ್ಟ್(Tooth paste) ಬಳಸುವ ಅವಶ್ಯಕತೆ ಇಲ್ಲ. ಒಂದು ಬಟಾಣಿ ಗಾತ್ರ ಸಾಕು. ಅದಕ್ಕಿಂತ ಹೆಚ್ಚು ಬಳಸಿದರೆ ಹಲ್ಲು ಹೆಚ್ಚು ಸ್ವಚ್ಛವಾಗುವುದಿಲ್ಲ. ಮುಖ್ಯವಾಗಿ ಹಲ್ಲುಜ್ಜುವ ತಂತ್ರವೇ ಮುಖ್ಯ. ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಬಳಸುವುದರಿಂದ ಹಲ್ಲು ಕೊಳೆಯುವುದನ್ನು ತಡೆಯಬಹುದು.
ಒಟ್ಟಾರೆ, ಮಕ್ಕಳಿಗೂ ವಯಸ್ಕರಿಗೂ ಸರಿಯಾದ ಪ್ರಮಾಣದ ಟೂತ್‌ಪೇಸ್ಟ್ ಬಳಸುವುದು ಅತ್ಯಂತ ಪ್ರಮುಖ. ಸಣ್ಣ ಪ್ರಮಾಣ ಸಾಕಷ್ಟು ರಕ್ಷಣೆ ನೀಡುತ್ತದೆ, ಆರೋಗ್ಯ ಕಾಪಾಡುತ್ತದೆ ಮತ್ತು ವ್ಯರ್ಥವೂ ಆಗುವುದಿಲ್ಲ. ಮುಂದಿನ ಸಲ ಬ್ರಷ್‌ಗೆ ಪೇಸ್ಟ್ ಹಾಕುವಾಗ, ಮಕ್ಕಳಿಗೆ(Kids) ಅಕ್ಕಿ ಗಾತ್ರ… ವಯಸ್ಕರಿಗೆ ಬಟಾಣಿ ಗಾತ್ರ… ಇದೇ ಸಾಕು ಎಂದು ನೆನಪಿಟ್ಟುಕೊಳ್ಳಿ. ಸರಿಯಾದ ಪ್ರಮಾಣ, ಸರಿಯಾದ ರೀತಿಯ ಹಲ್ಲುಜ್ಜುವಿಕೆ — ಹಲ್ಲುಗಳನ್ನು ದೀರ್ಘಕಾಲ ಆರೋಗ್ಯಕರವಾಗಿರಿಸುತ್ತದೆ…
ವರದಿ : ಗಾಯತ್ರಿ ಗುಬ್ಬಿ

