Tuesday, November 18, 2025

Latest Posts

Big boss Kannada: ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

- Advertisement -

Big Boss Kannada: ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿರುವ ರಿಷಾ ಅವರ ವಸ್ತ್ರವನ್ನು ವಾಶ್‌ರೂಮ್ ಬಳಿ ತಂದಿರಿಸಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ.

ಇದರ ಜತೆ ಮಹಿಳೆಯರಿಗೆ ಬೇಸರವಾಗುವ ರೀತಿ ವಾಗ್ದಾಳಿ ಮಾಡಿದ್ದಕ್ಕಾಗಿ ಗಿಲ್ಲಿ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಈ ಪ್ರಕರಣವನ್ನು ಮಹಿಳಾ ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ.

ಕೆಲ ದಿನಗಳ ಹಿಂದೆ ರಿಷಾ ಬಾತ್‌ರೂಮ್‌ಗೆ ಹೋಗಿದ್ದು, ಗಿಲ್ಲಿ ಬಾತ್‌ರೂಮ್‌ನಲ್ಲಿರುವ ಬಕೇಟ್ ಕೇಳಿದ್ದರು. ಆದರೆ ರಿಷಾ ಸ್ವಲ್ಪ ಸಮಯ ಕಾಯಿರಿ. ನಾನು ಸ್ನಾನ ಮಾಡಿ ಬಂದು ಬಕೇಟ್ ನೀಡುತ್ತೇನೆಂದು ರಿಕ್ವೆಸ್ಟ್ ಮಾಡಿದ್ದಾರೆ. ಆದರೂ ತಾಳ್ಮೆ ಇಲ್ಲದಂತೆ ವರ್ತಿಸಿದ್ದ ಗಿಲ್ಲಿ, ಬಕೇಟ್ ನೀಡಿಲ್ಲವೆಂದು, ರಿಷಾಳ ವಾಶ್ ಮಾಡಿರುವ ವಸ್ತ್ರಗಳನ್ನು ತಂದು ವಾಶ್‌ ರೂಮ್ ಬಳಿ ಇಟ್ಟಿದ್ದ. ಈ ಕಾರಣಕ್ಕೆ ಸಿಟ್ಟಾಗಿದ್ದ ರಿಷಾ ಕೂಗಾಡಿದ್ದರು. ಗಿಲ್ಲಿಗೆ ಏಟು ನೀಡಿದ್ದರು.

- Advertisement -

Latest Posts

Don't Miss