Sandalwood: ತನೀಷಾ ಕುಪ್ಪಂಡ ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾದಲ್ಲಿ ಅವಕಾಶ ಸಿಕ್ಕ ಬಳಿಕ ಓವರ್ ಕಾನ್ಫಿಡೆನ್ಸ್ ಬಂದಿದ್ದರ ಬಗ್ಗೆ ವಿವರಿಸಿದ್ದಾರೆ.
ತನೀಷಾ ಅವರಿಗೆ ಕನ್ನಡದಲ್ಲೇ ಮೂರ್ನಾಲ್ಕು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆಗ ಅವರು ತಾನು ಸಿನಿಮಾ ಹಿರೋಯಿನ್ ಆದೇ ಅನ್ನೋ ಓವರ್ ಕಾನ್ಫಿಡೆನ್ಸ್‌ನಲ್ಲೇ ಇದ್ದರಂತೆ. ಕೆಲವರು ಅಡ್ವಾನ್ಸ್ ನೀಡಿದರು, ಇನ್ನು ಕೆಲವರು ಸ್ಕ್ರಿಪ್ಟ್ ಪೂಜೆ ಮಾಡಿಸಿದರು. ಹೀಗೆ ಶುರು ಶುರುವಿನಲ್ಲಿ ಸಿನಿಮಾ ಕೆಲಸಗಳ ಬಗ್ಗೆ ಅರಿವಿಲ್ಲದ್ದರಿಂದ ತನೀಷಾ ಅವರಿಗೆ ಸಿನಿಮಾದಲ್ಲಿ ಹೆಸರು ಮಾಡೋ ಸಮಯ ಬಂದೇ ಬಿಡ್ತು ಅಂತಾ ಅನ್ನಿಸಿತ್ತಂತೆ.
ಆದರೆ ಕೆಲವು ಪೇಪರ್‌ನಲ್ಲಿ ಆ್ಯಡ್ ಬಂದ ಸಿನಿಮಾಗಳು ಆ್ಯಡ್‌ಗೆ ಮಾತ್ರ ಸೀಮಿತವಾಯಿತು. ಕೆಲವು ಸಿನಿಮಾ ಮುಹೂರ್ತಕ್ಕೆ ಮಾತ್ರ ಸೀಮಿತವಾಯಿತು. ಆಗ ಯಾರೋ ತನೀಷಾ ಬಳಿ, ಸಿನಿಮಾದಲ್ಲಿ ನಟಿಯಾಗುವವರು, ಸೈಡ್ ರೋಲ್ ಓಕೆ ಮಾಡಬಾರದು ಅಂತಾ ಹೇಳಿದ್ದರಂತೆ. ಅದರಂತೆ ತನೀಷಾ ಹಿರಿಯ ನಿರ್ದೇಶಕರ ಚಿತ್ರದಲ್ಲಿ ಸಿಕ್ಕಿದ್ದ ಸೈಡ್ ರೋಲ್ ರಿಜೆಕ್ಟ್ ಮಾಡಿದ್ದರಂತೆ. ಅದಾದ ಬಳಿಕ 8 ತಿಂಗಳು ತನೀಷಾಗೆ ಕೆಲಸವೇ ಇರಲಿಲ್ಲವಂತೆ.
ಬಳಿಕ ತನೀಷಾ ಅವರಿಗೆ ಸಿರಿಯಲ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಂತರ ತನೀಷಾ ಮತ್ತೆ ಸಿರಿಯಲ್ ಬಿಟ್ಟು ಕಂಪನಿಯಲ್ಲಿ ಕೆಲಸ ಮಾಡಿದ್ರು. ಬಳಿಕ ಟೈಫೈಡ್ ಬಂದು ಕೆಲಸವನ್ನೂ ಬಿಟ್ಟರು. ಬಳಿಕ ಮತ್ತೆ ಸಿರಿಯಲ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಕನ್ನಡ, ತೆಲುಗು, ತಮಿಳು ಸೇರಿ ಬೇರೆ ಬೇರೆ ಭಾಷೆಯಲ್ಲಿ 32 ಸಿರಿಯಲ್‌ನಲ್ಲಿ ತನೀಷಾ ನಟಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

