Thursday, December 4, 2025

Latest Posts

ದರ್ಶನ್ ಸರ್ ತುಂಬಾ ಇಷ್ಟ, ವರ್ತೂರು ಜೊತೆ ತುಂಬಾ ಕ್ಲೋಸ್ ಆಗಿದ್ದೆ: Tanisha Kuppanda Podcast

- Advertisement -

Sandalwood: ನಟಿ ತನೀಷಾ ಕುಪ್ಪಂಡ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ನನಗೆ ದರ್ಶನ್ ಸರ್ ಅಂದ್ರೆ ತುಂಬಾ ಇಷ್ಟ ಎಂದಿದ್ದಾರೆ.

ತನೀಷಾ ಕುಪ್ಪಂಡ ಸಿನಿಮಾ ಪ್ರೋಡ್ಯೂಸ್ ಮಾಡಿದ್ದರ ಬಗ್ಗೆ ಮಾತನಾಡಿದ್ದು, ನಾನು ಸಿನಿಮಾ ಮಾಡಿದ್ದರ ಬಗ್ಗೆ ಹಲವರಿಗೆ ಖಷಿ ಇದೆ. ಹಲವರಿಗೆ ಉರಿಯೂ ಇದೆ. ಓ ಇವಳು ಸಿನಿಮಾ ಮಾಡಿದ್ಲಾ ಅಂತಾನೂ ಹಲವರು ಮಾತನಾಡಿದ್ದರಂತೆ. ಅಂಥವರು ನನ್ನ ಹತ್ತಿರವೂ ಬರಬೇಡಿ ಅಂತಾರೆ ತನೀಷಾ.

ಇನ್ನು ಬಿಗ್‌ಬಾಸ್ ಶೋನಲ್ಲಿ ಭಾಗವಹಿಸಿದ ಬಗ್ಗೆ ಮಾತನಾಡಿರುವ ತನೀಷಾ, ಬಿಗ್‌ಬಾಸ್‌ನಲ್ಲಿ ನನಗೆ ಫೇಮ್ ಸಿಕ್ಕಿತು. ಬಿಗ್‌ಬಾಸ್ ಮನೆಯಲ್ಲಿ ನಾವು ಎಲ್ಲರೂ ಕಿತ್ತಾಡ್ತೀವಿ. ಆದರೆ ಆಚೆ ಬಂದ ಮೇಲೆ ಅದನ್ನು ಮುಂದುವರಿಸಬಾರದು. ವರ್ತೂರು, ಕಾರ್ತಿಕ್ ಸೇರಿ ನಾವೆಲ್ಲ ಕ್ಲೋಸ್ ಇದ್ವಿ. ಆದರೆ ನಾವು ಪ್ರತಿದಿನ ಮಾತಾಡಲ್ಲ. ಯಾವಾಗಲಾದರೂ ಸಿಗ್ತೀವಿ.

ಅದೇ ರೀತಿ ನಮೃತಾ ಜತೆ ನಾನು ಬಿಗ್‌ಬಾಸ್‌ನಲ್ಲಿ ಜಗಳವಾಡಿರಬಹುದು. ಆದರೆ ಅವರು ಓರ್ವ ಕಲಾವಿದೆ. ನಿರ್ಮಾಪಕಿಯಾಗಿ ನನಗೆ ಬೇಕಾಗಿರುವುದು ಕಲಾವಿದರು. ಹಾಗಾಗಿ ನಾವು ಕೋಣ ಸಿನಿಮಾದಲ್ಲಿ ಇಬ್ಬರೂ ನಟಿಸಿದ್ದೇವೆ ಅಂತಾರೆ ತನೀಷಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss