Sandalwood: ಇನ್ನು ಕೆಲ ದಿನಗಳಲ್ಲೇ ರಾಮಾಚಾರಿ ಸಿರಿಯಲ್ ಮುಗಿಯಲಿದೆ. ಹಾಗಾದ್ರೆ ಆ ಬಳಿಕ ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಏನು ಮಾಡಲಿದ್ದಾರೆ ಅಂತಾ ಅವರೇ ಹೇಳಿದ್ದಾರೆ ಕೇಳಿ.
ರಾಮಾಚಾರಿ ಸಿರಿಯಲ್ನಲ್ಲಿ ರಾಮಾಚಾರಿಯಾಗಿ ಅಭಿನಯಿಸುತ್ತಿರುವ ರಿತ್ವಿಕ್ ಕೃಪಾಕರ್ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡಿದ್ದಾರೆ. ಇನ್ನು ಕೆಲ ದಿನಗಳಲ್ಲೇ ರಾಮಾಚಾರಿ ಸಿರಿಯಲ್ ಮುಗಿಯಲಿದೆ. ಆಮೇಲೇನು ಮಾಡ್ತೀರಿ..? ನೀವ್ಯಾಕೆ ಈ 1 ಸಿರಿಯಲ್ನಲ್ಲಿ ಮಾತ್ರ ನಟಿಸಿದ್ರಿ..? ಬೇರೆ ಸಿನಿಮಾ, ಸಿರಿಯಲ್ನಲ್ಲಿ ಅವಕಾಶ ಸಿಗಲಿಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ರಿತ್ವಿಕ್, ನನಗೆ ಹಲವು ಸಿನಿಮಾ, ಸಿರಿಯಲ್ ಆಫರ್ ಬಂದಿತ್ತು. ಆದರೆ ನಾನು ಈ 1 ಪಾತ್ರಕ್ಕೆ ಮಾತ್ರ ಫೋಕಸ್ ಮಾಡಿದ್ದೇನೆ.
ಇನ್ನು ಕೆಲ ದಿನಗಳಲ್ಲೇ 4 ವರ್ಷದ ರಾಮಾಚಾರಿ ಜರ್ನಿ ಮುಗಿಯಲಿದೆ. ಆಮೇಲೆ ಸಿನಿಮಾದಲ್ಲಿ ನಟಿಸುವ ಯೋಚನೆ ಇದೆ. ನಾನು ನಟಿಸುವ ಪ್ರಥಮ ಚಿತ್ರ ಹೆಸರು ಮಾಡತ್ತೆ ಅನ್ನೋ ಭರವಸೆ ನನಗಿದೆ. ಆದರೆ ಸರಿಯಾದ ನಿರ್ದೇಶಕ, ನಿರ್ಮಾಪಕರು, ಕಥೆ ಸಿಗದ ಕಾರಣ, ನಾನು ಯಾವ ಸಿನಿಮಾಗೂ ಓಕೆ ಎನ್ನಲಿಲ್ಲ ಅಂತಾರೆ ರಿತ್ವಿಕ್.
ಅಲ್ಲದೇ, ರಿತ್ವಿಕ್ ಈಗ ಸಿರಿಯಲ್ ಸ್ಟಾರ್. ಆದರೆ ಅವರು ಎಲ್ಲಿಯೂ ಬಾಡಿಗಾರ್ಡ್ ಜತೆ ಹೋಗಲ್ಲ ಯಾಕೆ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ನನಗೆ ಅದೇ ಬೇಕು. ನನ್ನನ್ನು ಮೆಚ್ಚುವವರು ನನ್ನ ಬಳಿ ಪ್ರೀತಿಯಿಂದ ಮಾತನಾಡಿಸಲು ಬರುತ್ತಾರೆ. ಅಂಥವರನ್ನು ತಡೆಯಲು ನನಗೆ ಮನಸ್ಸಿಲ್ಲ. ಅವರ ಪ್ರೀತಿ ನನಗೆ ಬೇಕು ಅಂತಾರೆ ರಿತ್ವಿಕ್.
ಇನ್ನು ತಮ್ಮ ಪ್ರಯತ್ನ ಮತ್ತು ಕಲೆಯ ಬಗ್ಗೆ ನಂಬಿಕೆ ಇಟ್ಟಿರುವ ರಿತ್ವಿಕ್, ಮುಂದೆ 1 ದಿನ ನಾನು ರಸ್ತೆಗೆ ಹೋಗಲು ಆಗಲ್ಲ, ಅಷ್ಟು ಅಭಿಮಾನಿಗಳು ಇರ್ತಾರೆ. ನಾನು 1 ರೆಸ್ಟೋರೆಂಟ್ ಬುಕ್ ಮಾಡಬೇಕಾಗುತ್ತದೆ. ನನಗೆ ಆವಾಗ ಬಾಡಿಗಾರ್ಡ್ ಇರುತ್ತಾರೆ. ಅಂಥ ದಿನ ಬಂದೇ ಬರುತ್ತದೆ ಅಂತಾರೆ ರಿತ್ವಿಕ್. ಅವರ ಆಸೆ ಬೇಗ ಈಡೇರಲಿ ಎಂದು ಹಾರೈಸುವ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

