Sandalwood: ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಮದುೆಯಾಗುವ ಹುಡುಗಿ ಹೇಗಿರಬೇಕು ಅಂತಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನನಗೆ ಗರ್ಲ್ ಫ್ರೆಂಡ್ ಇದಾಳೋ ಇಲ್ವೋ ಅನ್ನೋದು ಇನ್ನು ಎರಡ್ಮೂರು ವರ್ಷದಲ್ಲಿ ನನ್ನ ಮದುವೆ ಅನೌನ್ಸ್ ಆದಾಗ ನಿಮಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ. ಅಂದ್ರೆ ರಾಮಾಚಾರಿಗೆ ಗರ್ಲ್ ಫ್ರೆಂಡ್ ಇರಬಹುದು ಅಂತಾನೆ ಹಲವರು ಅಂದಾಜಿಸಿದ್ದಾರೆ.
ಇನ್ನು ಮದುವೆಯಾಗುವ ಹುಡುಗಿ ಹೇಗಿರಬೇಕು ಅಂತಾ ಹೇಳಿರುವ ರಾಮಾಚಾರಿ, ನನ್ನ ಮದುವೆಯಾಗುವ ಹುಡುಗಿ ಜೀವನದಲ್ಲಿ ಕಷ್ಟ ನೋಡಿರಬೇಕು. ಆಕೆಗೆ ಪ್ರಯತ್ನ, ಕಷ್ಟ, ಸಾಧನೆ ಅನ್ನೋದು ಏನು ಅಂತಾ ತಿಳಿದಿರಬೇಕು. ತೀರಾ ಆರಾಮವಾಗಿ, ಸಲುಗೆಯಿಂದ, ಶ್ರೀಮಂತಿಕೆಯಲ್ಲಿ, ಸುಖವಾಗಿ ಬೆಳೆದ ಹುಡುಗಿಗೆ ನಾನು ಏನಾದರೂ ತೋರಿಸಿದರೆ, ಅಯ್ಯೋ ಇಷ್ಟೇನಾ ಅಂತಾ ಅನ್ನಿಸುತ್ತದೆ. ಆದರೆ ನನ್ನ ಮದುವೆಯಾಗುವ ಹುಡುಗಿ ಸರಳವಾಗಿರಬೇಕು. ನನ್ನ ಫೀಲ್ಡ್ ಅರ್ಥ ಮಾಡಿಕ“ಂಡಿರಬೇಕು ಎಂದು ರಿತ್ವಿಕ್ ಮನದಾಸೆ ಹೇಳಿದ್ದಾರೆ.
ಇನ್ನು ಸ್ಯಾಂಡಲ್‌ವುಡ್‌ನಲ್ಲಿ ನಿಮ್ಮ ಕ್ರಶ್ ಯಾರು ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ರಿತ್ವಿಕ್, ರಮ್ಯಾ ಮೇಡಂ ನನ್ನ ಶಾಲಾ ದಿನಗಳಿಂದಲೂ ಕ್ರಶ್ ಎಂದಿದ್ದಾರೆ. ಅಲ್ಲದೇ ನಿಮ್ಮನ್ನು 1 ಸಲ ಮೀಟ್ ಮಾಡಬೇಕು. ಮಾತಾಡಬೇಕು ಎಂದು ಅವರು ಕರ್ನಾಟಕ ಟಿವಿ ಮೂಲಕ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

