Sandalwood: ನಟಿ ವಿನಯಾ ಪ್ರಸಾದ್ ಅವರ ಮಗಳಾದ ಪ್ರಥಮಾ ಪ್ರಸಾದ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ್ದಾರೆ.
ಪ್ರಥಮಾ ಅವರು ಉಡುಪಿಯಲ್ಲಿ ಜನಿಸಿದ್ದರಾದರೂ, ಬೆಳೆದಿದ್ದು ಬೆಂಗಳೂರಿನಲ್ಲಿ. ಅಂಬಲ್ಪಾಡಿಯ ಅಂಗನವಾಡಿಯಲ್ಲಿ ಕಲಿತ ಪ್ರಥಮಾ ಅಜ್ಜಿ ಬೆಳೆಸಿದ ಪುಳ್ಳಿ (Grand daughter). ಆದರೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರಥಮಾ ಬೆಂಗಳೂರಿಗೆ ಬರಬೇಕಾಯ್ತು. ಚಿಕ್ಕಂದಿನಲ್ಲೇ ತಂದೆ ತೀರಿಹೋದ ಕಾರಣ, ಪ್ರಥಮಾ ಬಾಲ್ಯ ಎಲ್ಲ ಮಕ್ಕಳ ಬಾಲ್ಯದ ರೀತಿ ಇರಲಿಲ್ಲ.
ಲೈಫ್ ತುಂಬಾ ಚಾಲೆಂಜಿಂಗ್ ಆಗಿತ್ತು. ಆದರೆ ಅಮ್ಮ ಸ್ಥಿರವಾದರು. ಶಕ್ತಿವಂತೆಯಾಗಲು ನಿರ್ಧರಿಸದರು. ಅವರು ಮಗಳಿಗೆ, ನೀನು ಅತ್ತರೆ ನನಗೂ ಅಳು ಬರುತ್ತದೆ. ಹಾಗಾಗಿ ನೀನು ಅಳಬೇಡ ಎಂದು ಮಗಳಿಗೆ ಧೈರ್ಯ ನೀಡಿದರು. ಬಳಿಕ ಮನೆ ಜನರ ಸಂಸಾರದ ಭಾರ ವಿನಯಾ ಪ್ರಸಾದ್ ತೆಗೆದುಕ“ಂಡರು. ಪ್ರಥಮಾಗೆ ಎಲ್ಲರ ಪ್ರೀತಿ ಸಿಗಬೇಕು, ಅಪ್ಪ ಇಲ್ಲದ ನೋವು ಕಾಡಬಾರದು ಎಂದು ಆಕೆಯ ಮನೆಜನರೆಲ್ಲ ಉಡುಪಿಯಿಂದ ಬೆಂಗಳೂರಿಗೆ ಶಿಫ್ಟ್ ಆದರು.
ಬಳಿಕ ಪ್ರಥಮಾ ಅವರನ್ನು ಉತ್ತಮ ಶಾಲೆಗೆ ಕಳುಹಿಸಲಾಯಿತು. ಮುಂದೆ ಪ್ರಥಮಾಗೆ ನೃತ್ಯ ಕಲಿಯುವ ಅವಕಾಶ ಸಿಕ್ಕು, ಅದರಲ್ಲೇ ಪ್ರಥಮಾ ಮುಂದುವರೆದರು. ಬಳಿಕ ಪ್ರಥಮಾ ವಿವಾಹವಾಗಿ, ತಾಯಿಯಾದ ಬಳಿಕ ಸಿರಿಯಲ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

