- Advertisement -
Mandya News: ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾ ಬ್ಲಫ್ನ ಕಾಲುವೆಯಲ್ಲಿ ಕಾಡಾನೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ನೀರು ಕುಡಿಯಲು ಬಂದ ಕಾಡಾನೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಸುಮಾರು 20 ಅಡಿ ಆಳದ ಕಾಲುವೆಗೆ ಬಿದ್ದಿದೆ. ಕಳೆದೆರಡು ದಿನಗಳಿಂದ ಕಾಡಾನೆ ಆಹಾರ ಇಲ್ಲದೇ ಪರದಾಡುತ್ತಿದ್ದು, ಕಾಲುವೆಗೆ ಸರಬರಾಜಾಗ್ತಿದ್ದ ನೀರು ನಿಲ್ಲಿಸಿ, ಬೃಹತ್ ಕ್ರೇನ್ ಮೂಲಕ ಆನೆ ಮೇಲೆತ್ತಲು ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಲಾಗ್ತಿದೆ.
ಮಂಡ್ಯವಡಿಸಿಎಫ್ ರಘು ಹಾಗೂ ವನ್ಯಜೀವಿ ವಲಯ ಮೈಸೂರು ವಿಭಾಗ ಡಿಸಿಎಫ್ ಪ್ರಭು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಆನೆಗೆ ಅರವಳಿಕೆ ಮದ್ದು ನೀಡಿ ಮೇಲೆತ್ತಲು ನಿರ್ಧಾರಿಸಲಾಗಿದೆ. ಅದಕ್ಕೂ ಮುನ್ನ ಅದಕ್ಕೆ ಆಹಾರ ನೀಡಲಾಗ್ತಿದೆ. ಡಾ.ರಮೇಶ್ ಹಾಗೂ ಡಾ.ಆದರ್ಶ್ ರವರು ಆನೆಗೆ ಅರವಳಿಕೆ ಮದ್ದು ನೀಡಲಿದ್ದಾರೆ.
- Advertisement -

