Recipe: ಬೇಕಾಗುವ ಸಾಮಗ್ರಿ: ಬ್ರೆಡ್, 2 ಬೇಯಿಸಿ ಮ್ಯಾಶ್ ಮಾಡಿದ ಆಲೂ, ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಶುಂಟಿ, ಸ್ವಲ್ಪ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ ಮತ್ತು ಧನಿಯಾ ಪುಡಿ, ತುಪ್ಪ ಅಥವಾ ಬೆಣ್ಣೆ, ಕೊತ್ತೊಂಬರಿ ಸೊಪ್ಪು, ಪುದೀನಾ ಚಟ್ನಿ, ಚೀಸ್ ಸ್ಲೈಸ್, ಬೇಯಿಸಿ ಸ್ಲೈಸ್ ಮಾಡಿದ ಬೀಟ್‌ರೂಟ್, ಟೋಮೆಟೋ, ಈರುಳ್ಳಿ, ಕ್ಯಾಪ್ಸಿಕಂ, ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಶುಂಟಿ ಹಾಕಿ ಹುರಿಯಿರಿ. ಬಳಿಕ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಹಾಕಿ. ನಂತರ ಉಪ್ಪು ಮತ್ತು ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ. ಬಳಿಕ ಕೊತ್ತೊಂಬರಿ ಸೊಪ್ಪು ಹಾಕಿ.
ಈಗ ಬ್ರೆಡ್ ಮೇಲೆ ಬೆಣ್ಣೆ ಸ್ಪ್ರೆಡ್ ಮಾಡಿ, ಇನ್ನ“ಂದು ಬ್ರೆಡ್ ಮೇಲೆ ಪುದೀನಾ ಚಟ್ನಿ ಸ್ಪ್ರೆಡ್ ಮಾಡಿ, ಅದರ ಮೇಲೆ ಆಲೂಗಡ್ಡೆ ಪಲ್ಯ, ಚೀಸ್ ಸ್ಲೈಸ್, ಬೇಯಿಸಿ ಸ್ಲೈಸ್ ಮಾಡಿದ ಬೀಟ್‌ರೂಟ್, ಟೋಮೆಟೋ, ಈರುಳ್ಳಿ, ಕ್ಯಾಪ್ಸಿಕಂ ಎಲ್ಲವನ್ನು ಹಾಕಿ ಪ್ಯಾನ್ ಬಿಸಿ ಮಾಡಿ ಗ್ರಿಲ್ ಮಾಡಿದ್ರೆ, ಚೀಸಿ ಬಾಂಬೆ ಮಸಾಲಾ ಟೋಸ್ಟ್ ರೆಡಿ. ಇದರ ಮೇಲೆ ನೀವು ಸೇವ್ ಹಾಕಿ ಸರ್ವ್ ಮಾಡಿ.

