Mahabharat: ಮಹಾಭಾರತ ಯುದ್ಧದಲ್ಲಿ ಬರುವ ಪ್ರಮುಖ ಪಾಾತ್ರಗಳಲ್ಲಿ ಶಕುನಿ ಪಾತ್ರ ಕೂಡ 1. ಅಪ್ಪ ಮತ್ತು ತನ್ನ ಮನೆಯವರ ಪ್ರಾಣ ತೆಗೆದ ಕಾರಣ ಕೌರವರ ವಿರುದ್ಧ ಸೇಡು ತೀರಸಿಕ“ಳ್ಳಲು ಶಕುನಿ ಬಂದಿದ್ದ.
ಅದೇ ರೀತಿ ಕೌರವರ ಮನಸ್ಸಿನಲ್ಲಿ ಪಾಂಡವರ ವಿರುದ್ಧ ವಿಷ ಬೀಜ ಬಿತ್ತಿದನು. ತನ್ನ ತಂದೆಯ ಮೂಳೆಯಿಂದ ಮಾಡಿದ ದಾಳವನ್ನಿಸಿ, ಕೌರವರು ಮತ್ತು ಪಾಂಡವರು ಜೂಜಾಡುವಂತೆ ಮಾಡಿ, ಅದರಲ್ಲಿ ಪಾಂಡವರು ಸೋಲುವಂತೆಯೂ ಮಾಡಿದನು. ಬಳಿಕ ದ್ರೌಪದಿ ವಸ್ತ್ರಾಪಹರಣ ನಡೆಯಿತು. ಅಂದೇ ದ್ರೌಪದಿ ಮಹಾಭಾರತ ಯುದ್ಧಕ್ಕೆ ನಾಂದಿ ಹಾಾಡಿದಳು. ಹಾಗಾಗಿ ಮಹಾಭಾರತ ಯುದ್ಧ ನಡೆಯಲು ದ್ರೌಪದಿ ಹೇಗೆ ಕಾರಣಳಾದಳೋ, ಅದೇ ರೀತಿ ಶಕುನಿ ಕೂಡ ಯುದ್ಧಕ್ಕೆ ಸಮಾನ ಕಾರಣಕರ್ತನಾಗಿದ್ದಾನೆ.
ಇದೆಲ್ಲ ಮಾಡಿಯೂ ಶಕುನಿ ಸ್ವರ್ಗಕ್ಕೆ ಹೋಗುತ್ತಾನೆ. ಪಾಂಡವರು ಸ್ವರ್ಗಕ್ಕೆ ಹೋದಾಗ, ಅಲ್ಲಿ ದುಶ್ಶಾಸನ, ದುರ್ಯೋಧನ, ಶಕುನಿಯೂ ಸ್ವರ್ಗದಲ್ಲಿ ಇರುವುದು ಕಂಡು ಆಶ್ಚರ್ಯವಾಗುತ್ತದೆ. ಆದರೆ ಇವರಿಗೆಲ್ಲ ಹೇಗೆ ಸ್ವರ್ಗ ಸಿಕ್ಕಿತು ಎಂಬ ಪ್ರಶ್ನೆಗೆ ಉತ್ತರ, ಮಹಾಭಾರತ ಯುದ್ಧದಲ್ಲಿ ಸಾವನ್ನಪ್ಪಿದವರೆಲ್ಲರೂ ಸ್ವರ್ಗ ಸೇರುತ್ತಾರೆ ಎಂದು ಶ್ರೀಕೃಷ್ಣನೇ ಹೇಳಿದ್ದಾನೆ. ಇದೇ ಕಾರಣಕ್ಕೆ ಶಕುನಿ ಜೀವನ ಪೂರ್ತಿ ದುಷ್ಕೃತ್ಯಗಳನ್ನೇ ಮಾಡಿದರೂ ಸ್ವರ್ಗ ಸೇರುತ್ತಾನೆ.

