Tumakuru News: ತುಮಕೂರು: ಪೋಷಕರು ಮತ್ತು ಶಿಕ್ಷಕರ ಸಭೆ ಅಂದ್ರೆ ಅಲ್ಲಿ ಮಕ್ಕಳ ಭವಿಷ್ಯದ ಬಗೆಗಿನ ವಿದ್ಯಾಭ್ಯಾಸದ ಬಗೆಗಿನ ಮಾತುಗಳು ಮಾತನಾಡಬೇಕಾಗುತ್ತದೆ. ಅದು ಕೂಡ ಆರೋಗ್ಯಕರವಾದ ಮಾತುಗಳು. ಆದರೆ ಈ ಶಾಲೆಯಲ್ಲಿ ಸಭೆ ಅನ್ನೋದು ಗಲಾಟೆಯಾಗಿ ಪರಿವರ್ತನೆಯಾಗಿದೆ.
ತುಮಕೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಮಹಾಸಭೆಯಲ್ಲಿ ಗಲಾಟೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿಯ ಸರ್ಕಾರಿ ಪಿ.ಎಂ.ಶ್ರೀ ಹಿರಿಯ ಪಾಠಶಾಲೆಯಲ್ಲಿ ಘಟನೆ ನಡೆದಿದ್ದು, ಪಾಠ ಸರಿಯಾಗಿಲ್ಲ ಮಾಡ್ತಾ ಇಲ್ಲ ಅಂದ ಪೋಷಕನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಪಾಠ ಮಾಡೋ ಶಿಕ್ಷಕರಿಂದ ಅನುಚಿತ ವರ್ತನೆಗೆ ಪೋಷಕರು ಕೆಂಡಾಮಂಡಲರಾಗಿದ್ದಾರೆ.
ಹಿಂದಿ ವಿಷಯ ಸರಿಯಾಗಿ ಭೋದಿಸಿದ ಶಿಕ್ಷಕಿ ಸುಮಿತ್ರಾ ವಿರುದ್ಧ ಪೋಷಕ ಕೆಂಪರಾಜು ಎಂಬುವವರು ದೂರು ಹೇಳಿದ್ದರು. ದೂರು ನೀಡಿದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಕ್ಕೆ ಕೆಂಪರಾಜು ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ.
ಈ ವೇಳೆ ಶಿಕ್ಷಕ ಪುರುಷೋತ್ತಮ್ ಪೋಷಕ ಕೆಂಪರಾಜು ನಡುವೆ ಮಾತಿನ ಚಕಮಕಿ ನಡೆದಿದ್ದು, ಶಿಕ್ಷಕಿ ಕೆಂಪರಾಜು ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹೀಗಾಗಿ ಹಲ್ಲೆಗೆ ಯತ್ನಿಸಿದ ಶಿಕ್ಷಕರ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

