Tumakuru News: ತುಮಕೂರು: ತುಮಕೂರಿನಲ್ಲಿಂದು ಭಾಷಣ ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, 50 ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕಾಗಿ ಆಹ್ವಾನ ನೀಡಲು ಬಂದಿದ್ದೇನೆ ಎಂದಿದ್ದಾರೆ.
50 ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ. ನಾನು ಇಲಾಖೆಯ ಮಂತ್ರಿಯಾಗಿ ಖುದ್ದು ಆಹ್ವಾನ ನೀಡಲು ಬಂದಿದ್ದೇನೆ. 2 ವರೆ ವರ್ಷದ ಹಿಂದೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಡಾ ಜಿ ಪರಮೇಶ್ವರ್ ಅವರು ನಾಲ್ಕಯ ಭಾರಿ ಬಿ ಪಾರಂ ನ್ನ ಕೊಟ್ಟಿದ್ದಾರೆ. ಇಲಾಖೆಯಲ್ಲಿ ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ನನ್ನದೇ ಆದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಗೃಹ ಲಕ್ಷ್ಮೀ ಯೋಜನೆಯಿಂದ ಇಲಾಖೆಗೆ ಅತಿ ಹೆಚ್ಚು ಹೆಸರು ಬಂದಿದೆ. ತುಮಕೂರಿನಲ್ಲಿ ಗೃಹ ಲಕ್ಷ್ಮೀ ಯೋಜನೆ 99.91 ಶೇ ಆಗಿದೆ..ಎಲ್ಲರಿಗೂ ಧನ್ಯವಾದಗಳು ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.
ಮಕ್ಕಳ ಪೌಷ್ಟಿಕ ಆಹಾರ ಕಳವು ತಡೆಯಲು ಮುಖ ಗುರುತಿಸು ತಂತ್ರಜ್ಞಾನ ಅಳವಡಿಸಿ ಕ್ರಮವಹಿಸಲಾಗಿದೆ. ಇದನ್ನ ಕೇಂದ್ರ ಸರ್ಕಾರ ಕೂಡ ಅಳವಡಿಸಿಕೊಂಡಿದೆ. ನಮ್ಮ ಇಲಾಖೆ ಮನುಷ್ಯತ್ವ, ಸಮಾಜಿಕ ಭದ್ರತೆ, ಆರೋಗ್ಯವಂತ ಮಗುವನ್ನ ಕೊಡುತ್ತೆ, ಮಾನವೀಯತೆ ಇಲಾಖೆ. ಮಹಿಳೆಯರು, ಮಕ್ಕಳ ಬಗ್ಗೆ ನಾನು ಹೃದಯದಿಂದ ಕೆಲಸ ಮಾಡ್ತೇನೆ ಎಂಬ ಕಾರಣಕ್ಕೆ ನನಗೆ ಈ ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯದ ಸಹಯೋಗದಲ್ಲಿ ಈ ಇಲಾಖೆ ನಡೆಯುತ್ತದೆ.
ಬಿಜೆಪಿ ಕೇಂದ್ರ ಸರ್ಕಾರ ಇದ್ದರೂ ಸಹ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಅತಿ ಹೆಚ್ಚು ಅನುದಾನ ತಂದಿದ್ದೇನೆ. 28 ಸಾವಿರ ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಶಿಕ್ಷಣ ಆರಂಬಿಸಿಸುತ್ತಿದ್ದೇವೆ. ಅಂಗನವಾಡಿಯಲ್ಲಿ ಕಾರ್ಯನಿರ್ಯವಹಿಸುತ್ತಿರುವ ಕಾರ್ಯಕರ್ತೆಯರಲ್ಲಿ ಪದವಿ ಮುಗಿಸಿರುವರನ್ನ ಬಳಸಿಕೊಂಡು ಮೊದಲ ಹಂತದಲ್ಲಿ 5 ಸಾವಿರ ಮಾಂಟೆಸ್ಸರಿ ಪ್ರಾರಂಭವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ..

