ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ: ಆರ್.ಅಶೋಕ್

Political News: ಬೆಂಗಳೂರಿನ ಹೃದಯ ಭಾಗ ಎನ್ನಿಸಿಕ“ಂಡಿರುವ ಜಯನಗರದ ಎಟಿಎಂನಲ್ಲಿ ಹಣ ಹಾಕುವಾಗ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ. 

ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಬ್ಯಾಂಕ್ ಲೂಟಿ ಆಯಿತು ಈಗ ಎಟಿಎಂಗೆ ಹಣ ಸಾಗಿಸುತ್ತಿದ್ದ ಹಣ ಮಟಮಟ ಮಧ್ಯಾಹ್ನ ನಡುರಸ್ತೆಯಲ್ಲಿ ದರೋಡೆ! ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ಇಂದು ಮಟಮಟ ಮಧ್ಯಾಹ್ನ ನಡೆದಿರುವ ಎಟಿಎಂ ವಾಹನ ದರೋಡೆಯೇ ಸ್ಪಷ್ಟ ನಿದರ್ಶನ ಎಂದಿದ್ದಾರೆ.

ಒಂದು ಕಡೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುರ್ಚಿ ಉಳಿಸಿಕೊಳ್ಳುವ, ಕುರ್ಚಿ ಕಸಿದುಕೊಳ್ಳುವ ಜಟಾಪಟಿಯಲ್ಲಿ ಮಗ್ನರಾಗಿದ್ದರೆ, ಸಚಿವರು ತಮ್ಮ ಗತಿ ಏನು ಎಂದು ಕಂಗಾಲಾಗಿದ್ದಾರೆ. ಇನ್ನು ಸರ್ಕಾರವೇ ಗಡಗಡ ಎಂದು ಅಲ್ಲಾಡುತ್ತಿರುವಾಗ ಅಧಿಕಾರಿಗಳು ದಿಕ್ಕು ತೋಚದೆ ನಿಷ್ಕ್ರಿಯರಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಡುರಸ್ತೆಯಲ್ಲಿ, ಹಾಡುಹಗಲೇ, ಗನ್ ಮ್ಯಾನ್ ಗಳ ಉಪಸ್ಥಿತಿಯಲ್ಲಿ 7 ಕೋಟಿ ರೂಪಾಯಿ ತುಂಬಿರುವ ಎಟಿಎಂ ವಾಹನ ದರೋಡೆ ಆಗುತ್ತೆ ಅಂದರೆ ಇನ್ನು ಜನಸಾಮಾನ್ಯರ ಗತಿ ಏನು? ಜನಸಾಮಾನ್ಯರ ಮನೆ, ಅಂಗಡಿಗಳು ಆಸ್ತಿ-ಪಾಸ್ತಿಗೆ ಸುರಕ್ಷತೆ ಎಲ್ಲಿದೆ? ಒಟ್ಟಿನಲ್ಲಿ ಒಂದಂತೂ ಗ್ಯಾರೆಂಟಿ. ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

About The Author