ನಿಮಗೂ ಆಗಾಗ ಕಾರಣವಿಲ್ಲದೆ ಬೇಸರ, ಚಡಪಡಿಕೆ, ಕೋಪ ಅಥವಾ ಹತಾಶೆಯ ಭಾವನೆ ಬರುತ್ತಾ? ಕೆಲಸ ಮಾಡ್ತಾ ಇದ್ದರೂ concentration ಹೋಗುತ್ತಾ? ಇದೊಂದು ಸಾಮಾನ್ಯ ವಿಷಯ ಅಂತಾ ಹಲವರು ನಿರ್ಲಕ್ಷ್ಯ ಮಾಡ್ತಾರೆ. ಆದರೆ ಇದು ಸಾಮಾನ್ಯ ಅಲ್ಲ. ಇದರ ಹಿಂದೆ ಒಂದು ಪ್ರಮುಖ ಕಾರಣ ಇರಬಹುದು – ವಿಟಮಿನ್ B12 ಕೊರತೆ. ಹೌದು. ಈ ಒಂದು ವಿಟಮಿನ್ ಕಡಿಮೆಯಾದರೆ, ಮೆದುಳಿನ “ಸಂತೋಷದ ಹಾರ್ಮೋನು”ಗಳ ಮಟ್ಟ ಕಡಿಮೆಯಾಗಿತ್ತೇ. ಅದರಿಂದಲೇ ನಕಾರಾತ್ಮಕ ಆಲೋಚನೆಗಳು, ಕಿರಿಕಿರಿ, ದಿಕ್ಕುತೋಚದ ಭಾವನೆ ಹೆಚ್ಚಾಗುತ್ತವೆ.
ವಿಟಮಿನ್ B12 ಕೊರತೆಯಾದ್ರೆ ಯಾವ ಲಕ್ಷಣಗಳು ಕಾಣಿಸುತ್ತವೆ ಗೊತ್ತಾ? ಕಾರಣವಿಲ್ಲದೆ ಕೋಪ–ಚಡಪಡಿಕೆ, ನಿರಂತರ ಆಯಾಸ, ತಲೆ ತಿರುಗುವಿಕೆ, ಉಸಿರಾಟದ ತೊಂದರೆ, ಸ್ಮರಣಶಕ್ತಿ ದುರ್ಬಲಗೊಳ್ಳುವುದು, ಏಕಾಗ್ರತೆಯ ಕೊರತೆ, ಕೈ–ಕಾಲುಗಳಲ್ಲಿ ಸೆಳೆತ ಅಥವಾ ನೋವು, ಈ ಎಲ್ಲವೂ ಸಾಮಾನ್ಯ ಲಕ್ಷಣಗಳು. B12 ಕೊರತೆಯಾದಾಗ ಮೆದುಳಿನ ಸೆರೊಟೋನಿನ್ ಮತ್ತು ಡೋಪಮೈನ್ ಹಾರ್ಮೋನುಗಳ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಮನಸ್ಸು down ಆಗುವುದು, negativity ಹೆಚ್ಚಾಗುವುದು ಸಹಜ.
ಇಂದಿನ lifestyle, fast food, irregular diet ಮತ್ತು stress ಕಾರಣದಿಂದ ಬಹಳ ಜನರಲ್ಲಿ ವಿಟಮಿನ್ B12 ಕೊರತೆ ಸಾಮಾನ್ಯವಾಗಿದೆ. ವಿಶೇಷವಾಗಿ ಸಸ್ಯಾಹಾರಿಗಳಲ್ಲಿ ಇದು ಇನ್ನೂ ಹೆಚ್ಚು. ಏಕೆಂದರೆ B12 ಮುಖ್ಯವಾಗಿ ಮಾಂಸಾಹಾರದಲ್ಲಿ ಸಿಗುತ್ತದೆ. ದೇಹ ನಿಧಾನವಾಗಿ weak ಆಗಿ, ಮನಸ್ಸು ಚಂಚಲವಾಗಿ, ಕಾರಣವಿಲ್ಲದೆ anxiety ಮತ್ತು depression ತರದ feeling ಬರಬಹುದು. ಹೊರಗೆ ಎಲ್ಲವೂ ಸರಿಯಿರುವಂತೆ ಕಾಣಿಸಿಕೊಂಡರೂ ಒಳಗೆ ಖಿನ್ನತೆಯ ಭಾವನೆ ಹೆಚ್ಚಾಗುತ್ತಿರಬಹುದು – ಇದಕ್ಕೆ ಕಾರಣ B12 ಕೊರತೆಯಾಗಿರಬಹುದು.
ಹಾಗಾದ್ರೆ ಈ ಸಮಸ್ಯೆಯಿಂದ ಹೇಗೆ ಹೊರಬರಬೇಕು? ಅಂತ ನೋಡೋದಾದ್ರೆ ಮಾಂಸಾಹಾರಿಗಳು ಕೋಳಿ, ಮೊಟ್ಟೆ, ಮೀನುಗಳನ್ನು ನಿಯಮಿತವಾಗಿ ಸೇವಿಸಬಹುದು. ಸಸ್ಯಾಹಾರಿಗಳು ಹಾಲು, ಮೊಸರು, ಪನೀರ್, ಚೀಸ್ಗಳನ್ನು ಸೇವಿಸಬೇಕು. ಜೊತೆಗೆ ಬಲವರ್ಧಿತ ಧಾನ್ಯಗಳು, ಸೋಯಾ ಹಾಲು, nutritional yeast ಕೂಡಾ ತುಂಬಾ ಉಪಯುಕ್ತ. ಮತ್ತು ಮುಖ್ಯವಾಗಿ ನಿಮ್ಮ B12 ಮಟ್ಟವನ್ನು ಒಂದ್ಸಲ ಪರೀಕ್ಷೆ ಮಾಡಿಸಿಕೊಳ್ಳಿ. ಸರಿಯಾದ ಆಹಾರ ಮತ್ತು ಸರಿಯಾದ ಪೋಷಕಾಂಶಗಳಿದ್ದರೆ, energy, mood ಮತ್ತು mental health ತುಂಬಾ ಬೇಗ ನಾರ್ಮಲೈಸ್ ಆಗುತ್ತದೆ.
ವರದಿ : ಗಾಯತ್ರಿ ಗುಬ್ಬಿ

