Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಬಿಹಾರದ ಜನ ಕಾಂಗ್ರೆಸ್ ನ್ನು ಸೋಲಿಸಿ, ಸಿಂಗಲ್ ಡಿಜಿಟ್‌ಗೆ ತಂದಿರಿಸಿದೆ ಎಂದು ನಿಖಿಲ್ ಟಾಂಗ್ ನೀಡಿದ್ದಾರೆ.
ಬಿಹಾರದ ಜನತೆ ದೇಶಕ್ಕೆ ಸ್ಪಷ್ಟವಾದ ಸಂದೇಶ ನೀಡಿದ್ದು, ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರ ನಿದ್ದೆಗೆಡಿಸಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿಯುವುದಿಲ್ಲ. ಇನ್ನೊಂದು ಪಕ್ಷವನ್ನು ಲಘುವಾಗಿ ತೆಗಳುವುದು , ಅವಹೇಳನ ಮಾಡುವುದನ್ನು ಬಿಡಬೇಕು. ಇನ್ನಾದರು ಕಾಂಗ್ರೆಸ್ ಪಕ್ಷದ ನಾಯಕರು ಜನರ ಮುಂದೆ ತಗ್ಗಿ- ಬಗ್ಗಿ ನಡೆಯುವುದನ್ನು ಕಲಿಯಬೇಕು ಎಂದು ನಿಖಿಲ್ ಹೇಳಿದ್ದಾರೆ.
ಇನ್ನು ಕಸ ಗುಡಿಸುವ ಯಂತ್ರಕ್ಕೆ ಕೋಟಿ ಕೋಟಿ ರೂಪಾಯಿ ಹಾಾಕಿ ಬಾಡಿಗೆ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಿಖಿಲ್,ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? ಎಂದು ಕೇಳಿದ್ದಾರೆ.
ಕಸ ಗುಡಿಸುವ ಯಂತ್ರಗಳ ಬಗ್ಗೆ ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಬೆಂಗಳೂರು ಉಸ್ತುವಾರಿ ಮಂತ್ರಿಗಳಿಗೆ ಪ್ರಶ್ನೆ ಮಾಡಿದ್ದೇನೆ. ಹುಬ್ಬಳ್ಳಿ – ಧಾರವಾಡದಲ್ಲಿ ಇದೇ ಸರ್ಕಾರ ಕಸ ಗುಡಿಸುವ ಯಂತ್ರವನ್ನು ಒಂದು ಕೋಟಿ 45 ಲಕ್ಷಕ್ಕೆ ಎರಡು ಮಷಿನ್ ಖರೀದಿ ಮಾಡಿದೆ. ಬೆಂಗಳೂರಿಗೆ ಏಕೆ ಬೇಕಾ ಬಿಟ್ಟಿಯಾಗಿ 613 ಕೋಟಿ ರೂ. ವೆಚ್ಚ ಮಾಡಿ ಬಾಡಿಗೆ ತಗೋತೀರಾ.? ಸ್ವಂತಕ್ಕೆ ಖರೀದಿ ಮಾಡಬಹುದು ಅಲ್ಲವೇ! ಇದಕ್ಕೆ ಉತ್ತರ ನೀವೆ ಕೊಡಬಹುದು ಅಲ್ಲವೇ, ಲೋಕಾಯುಕ್ತಗೆ ಯಾಕೆ ಹೋಗ್ಬೇಕು.? ನಿಮಗೆ ಪರಿಜ್ಞಾನ ಇಲ್ಲವೇ? ಎಂದು ನಿಖಿಲ್ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

