ಸಾಕು ಸಿನಿಮಾ ಸಹವಾಸ? ಅಮ್ಮನಿಗಾಗದ ಕಹಿ ಅನುಭವ ಮಗಳಿಗೆ ಆಗಿದ್ಯಾ?: Prathama Podcast

Sandalwood: ಹಲವು ಕಲಾವಿದರಿಗೆ ಸಿನಿಮಾ ಸಹವಾಸ ಸಾಕು ಅಂತಾ 1 ಸಾರಿ ಆದ್ರೂ ಅನ್ನಿಸಿರುತ್ತದೆ. ಹಾಗಾದ್ರೆ ಪ್ರಥಮಾ ಪ್ರಸಾದ್ ಅವರಿಗೂ ಸಿನಿಮಾ ಸಹವಾಸ ಸಾಕು ಅಂತಾ ಅನ್ನಿಸಿದೆಯಾ ಅಂತಾ ಅವರ ಬಾಯಿಯಿಂದಲೇ ಕೇಳಿ.

ವಿನಯಾ ಪ್ರಸಾದ್ ಅವರು ಎಂದಿಗೂ ಮಗಳ ಬಳಿ ತಮ್ಮ ಸಿನಿ ಜರ್ನಿಯಲ್ಲಿ ಆಗಿರುವ ಕಹಿ ಅನುಭವವನ್ನು ಹೇಳುವುದಿಲ್ಲವಂತೆ. ಬರೀ ಹಾಸ್ಯ ಭರಿತ ವಿಷಯವನ್ನು ಮಾತ್ರ ಹೇಳುತ್ತಿದ್ದರಂತೆ. ಪ್ರಥಮಾ ಅವರೇ ಕೆದಕಿ ವಿಷಯ ಕೇಳಿದಾಗ ಮಾತ್ರ ಹೇಳುತ್ತಿದ್ದರಂತೆ.

ಶೂಟಿಂಗ್ ಸಮಯದಲ್ಲಿ ಕಷ್ಟ ಆದರೂ ಕೂಡ ವಿನಯಾ ಅವರು ಏನು ಹೇಳುತ್ತಿರಲಿಲ್ಲ. ಕಾಡಿನಲ್ಲಿ ಶೂಟಿಂಗ್ ಇದ್ದಾಗ, ನೀವು ವಾಪಸ್ ಬಂದುಬಿಡಿ ಅಂತಾ ಪ್ರಥಮಾ ಹೇಳಿದರೂ ಕೂಡ, ಹಾಗೇನಿಲ್ಲ ಇಲ್ಲೇನೂ ಸಮಸ್ಯೆ ಇಲ್ಲ. ಅರಣ್ಯ ಇಲಾಖೆಯವರು ಕೂಡ ನಮ್ಮನ್ನು ರಕ್ಷಣೆ ಮಾಡಿುತ್ತಿದ್ದಾರೆ ಎಂದು ವಿನಯಾ ಪ್ರಸಾದ್ ಹೇಳಿದ್ದರಂತೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author