ಕರಿಮಣಿ ಬಗ್ಗೆ ಹೇಳಿದ್ದೇನು? ಸೆಲೆಬ್ರಿಟಿ ಮಕ್ಕಳಾಗಿರೋದು ಕಷ್ಟ: Prathama Podcast

Sandalwood: ನಟಿ ಪ್ರಥಮಾ ಪ್ರಸಾದ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸೆಲೆಬ್ರಿಟಿ ಮಕ್ಕಳು ಅಂದ್ರೆ ತುಂಬಾ ಕಷ್ಟದ ವಿಷಯ ಅಂತಾರೆ ಪ್ರಥಮಾ.

ಅಪ್ಪ ಅಥವಾ ಅಮ್ಮ ಸೆಲೆಬ್ರಿಟಿಯಾಗಿದ್ದರೆ, ಅವರು ತಮ್ಮ ಟ್ಯಾಲೆಂಟ್ ಬಗ್ಗೆ ಛಾಪು ಮೂಡಿಸಿರುತ್ತಾರೆ. ಆದರೆ ಅವರ ಮಕ್ಕಳು ಕೂಡ ಅದೇ ರೀತಿ ಇರಬೇಕು ಅಂತಲೇ ಬಯಸುತ್ತಾರೆ. ಆದರೆ ಮಕ್ಕಳು ಆ ರೀತಿ ಆಗುವುದು ತುಂಬಾ ಕಷ್ಟ. ಅಪ್ಪ ಅಮ್ಮ ಸಿನಿಮಾದಲ್ಲಿ ಇದ್ದಾಗ, ಸ್ಪರ್ಧಾತ್ಮಕ ಮನೋಭಾವವಿರಲಿಲ್ಲ. ಸೋಶಿಯಲ್ ಮೀಡಿಯಾ ಟ್ರೆಂಡ್ ಇರಲಿಲ್ಲ. ಹೀಗೆ ಅನೇಕ ಕಾರಣಗಳಿಂದ ಅವರು ಫೇಮಸ್ ಆಗಿರುತ್ತಾರೆ. ಆದರೆ ಸೆಲೆಬ್ರಿಟಿಗಳ ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಪ್ರಸಿದ್ಧರಾಗೋದು ಅಷ್ಟು ಸುಲಭವಲ್ಲ ಅಂತಾರೆ ಪ್ರಥಮಾ.

ಇನ್ನು ತಮ್ಮ ಪ್ಲಸ್-ಮೈನಸ್ ಬಗ್ಗೆ ಮಾತನಾಡಿರುವ ಪ್ರಥಮಾ, ಮೈನಸ್ ಅಂದ್ರೆ ನಾನು ಬೇಗ ಜನರನ್ನು ನಂಬಿಬಿಡ್ತೀನಿ. ಅದರಿಂದ ಮೋಸ ಕೂಡ ಆಗಿದೆ. ಅಲ್ಲದೇ ನಾನು ಎದುರಿನವರು ಮಾಡುವ  ಕೆಲಸ ತಪ್ಪು ಅಂತಾದ್ರೆ ಅಲ್ಲೇ ಅದನ್ನು ಖಂಡಿಸುತ್ತೇನೆ. ಇದು ಹಲವರಿಗೆ ತಪ್ಪು ಅನ್ನಿಸಬಹುದು. ಆದರೆ ನಾನು ಇರೋದೇ ಹಾಗೆ ಅಂತಾರೆ ಪ್ರಥಮಾ. ಅಲ್ಲದೇ ಪ್ಲಸ್ ಅಂದ್ರೆ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ. ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಅಂತಾರೆ ಪ್ರಥಮಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author