Spiritual: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪತಿ-ಪತ್ನಿ ಜಗಳ ಹೆಚ್ಚಾಗಿರುವುದಕ್ಕೆ ಕಾರಣವೇನು ಅಂತಾ ಹೇಳಿದ್ದಾರೆ.
ಮದುವೆಯಾದ ಶುರುವಿನಲ್ಲಿ ಪತಿ-ಪತ್ನಿ ನಡುವೆ ಹೆಚ್ಚು ನಿರೀಕ್ಷೆಗಳು ಇರುತ್ತದೆ. ಅನುಭವವಿಲ್ಲದ ಕಾರಣ. ಪರಸ್ಪರ ನಿರೀಕ್ಷೆಗಳು ನಿರಾಸೆ ತರಬಹುದು. ಹಾಗಾಗಿ ಅವರು ಹೇಗಿದ್ದಾರೋ, ಅವರನ್ನು ಹಾಗೆ ಎಕ್ಸೆಪ್ಟ್ ಮಾಡಿ ಅಂತಾರೆ ಭರತ್. ಮದುವೆಯಾಗಿ ಕೆಲ ವರ್ಷಗಳಾದ ಮೇಲೆ ಅನುಭವ ಹೆಚ್ಚಾದ ಹಾಗೆ. ಜೀವನ ಚೆನ್ನಾಗಿರುತ್ತದೆ ಅನ್ನೋದು ಭರತ್ ಅನಿಸಿಕೆ.
ಇನ್ನು ಭರತ್ ಅವರದ್ದು ಕೂಡ ಲವ ಮ್ಯಾರೇಜ್. ಅವರ ಮಡದಿ ಮತ್ತು ಅವರು ಸೇಮ್ ಕಾಲೇಜಿನಲ್ಲೇ ಓದುತ್ತಿದ್ದರು. ಆಗ ಯಾವುದೋ ಕಾರ್ಯಕ್ರಮದಲ್ಲಿ ಭರತ್ ಅವರು ಅವರ ಪತ್ನಿಯನ್ನು ವೇದಿಕೆಗೆ ಕರೆದಾಗ, ಅವರ ಪತ್ನಿ ಕಂಗಾಲಾಗಿ ಅತ್ತಿದ್ದರಂತೆ. ಆಗ ಭರತ್ ಅವರ ಮಡದಿಯನ್ನು ಸಮಾಧಾನ ಮಾಡಿದ್ದರಂತೆ. ಹಾಗೆ ಗೆಳೆತನ ಪ್ರೀತಿಯಾಗಿ, ಈಗ ಇಬ್ಬರೂ ವಿವಾಹವಾಗಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

