Bengaluru: ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕನ್ನಡದ ಸುದ್ಧಿ ವಾಹಿನಿ ಕರ್ನಾಟಕ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ “ಕರುನಾಡ ಸುಧಾರಕರು” ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದರಾದ ಮಾನ್ಯ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ರವರು ಭಾಗವಹಿಸಿ, ಕನ್ನಡ ನಾಡು–ನುಡಿಯ ಮಹಿಮೆ, ಪರಂಪರೆ ಮತ್ತು ಸಂಸ್ಕೃತಿಯ ಶಾಶ್ವತತೆ ಬಗ್ಗೆ ವಿಶಿಷ್ಟವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

೭೦ ವರ್ಷದ ಕರ್ನಾಟಕದ ಗತವೈಭವವನ್ನು ಸ್ಮರಿಸಲು, ನಾಡಿನ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ನನ್ನ ಮಹಾ ಸೌಭಾಗ್ಯ ಎಂದು ಮಾನ್ಯ ಸಂಸದರು ಹೇಳಿದರು. ಕನ್ನಡವು ಕೇವಲ ಭಾಷೆಯಲ್ಲ, ಅದು ನಮ್ಮ ಆತ್ಮ, ನಮ್ಮ ಅಸ್ತಿತ್ವ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಬಿರುದಂಕಿತ ಎಂಬುದನ್ನು ಅವರು ಮನಮುಟ್ಟುವಂತೆ ಒತ್ತಿಹೇಳಿದರು.
ಕನ್ನಡ ನಾಡಿನ ಕೀರ್ತಿ–ಗೌರವವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬ ಕನ್ನಡಿಗನೂ ಜವಾಬ್ದಾರಿಯುತವಾಗಿ ನಿಂತುಕೊಳ್ಳಬೇಕೆಂದು ಸಂದೇಶ ನೀಡಿದ ಮಾನ್ಯ ಸಂಸದರು, ಮಾಧ್ಯಮ ಕ್ಷೇತ್ರದಲ್ಲಿ ಅಚಲ ಪರಿಶ್ರಮದ ಮೂಲಕ ಗ್ರಾಮೀಣ ನೆಲೆಯಲ್ಲಿಯೇ ಉತ್ತಮ ಗುಣಮಟ್ಟದ ಸುದ್ದಿಗಳನ್ನು ನೀಡುವ ಕರ್ನಾಟಕ ಟಿವಿಯ ಸ್ಥಾಪಕ ಹಾಗೂ ಎಲ್ಲರಿಗೂ ಸ್ಪೂರ್ತಿಯಾದ ಶ್ರೀ ಶಿವು ರವರನ್ನು ಮನಃಪೂರ್ವಕವಾಗಿ ಅಭಿನಂದಿಸಿದರು. ಕನ್ನಡದ ಹಿತ, ನಾಡಿನ ಹಿತಕ್ಕಾಗಿ ಅವರು ಮಾಡುತ್ತಿರುವ ಮೌಲ್ಯಯುತ ಸೇವೆಯನ್ನು ಸಂಸದರು ವಿಶೇಷವಾಗಿ ಮೆಚ್ಚಿದರು.




