Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಭರತ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ಜನ ಎಲ್ಲರ ಬಗ್ಗೆ ಹೇಗೆ ಕಾಮೆಂಟ್ಸ್ ಮಾಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಭರತ್ ಅವರು ವೀಡಿಯೋ ಮಾಡುವಾಗ, ಹಲವು ಬ್ಯಾಡ್ ಹ್ಯಾಬಿಟ್ಸ್ ಬಗ್ಗೆ ಮಾತನಾಡುತ್ತಾರೆ. ನಾವು ಯಾವ ರೀತಿಯಾಗಿ ದುರಭ್ಯಾಸಗಳನ್ನು ಬಿಡಬೇಕು ಅಂತಾ ವಿವರಿಸುತ್ತಾರೆ. ಅಂಥ ವೀಡಿಯೋಗಳಿಗೆ ಕೆಲವರು ಅಸಭ್ಯವಾಗಿ ಕಾಮೆಂಟ್ ಹಾಕುತ್ತಾರೆ. ಆ ಬಗ್ಗೆ ಮಾತನಾಡಿರುವ ಭರತ್, ಅಂಥವರಿಗೆ ನನ್ನ ದಿನಚರಿಯ ಬಗ್ಗೆ ಯಾವ ಅರಿವೂ ಇರುವುದಿಲ್ಲ. ಅವರಿಗೆ ಮನಸ್ಸಿಗೆ ಬಂದ ಹಾಗೆ ಕಾಮೆಂಟ್ ಹಾಕುತ್ತಾರೆ. ನಾವು ಏನು ಹೇಳುತ್ತೇವೋ, ಅದೇ ರೀತಿ ನಾವು ಇರಬೇಕಾಗುತ್ತದೆ ಎಂದಿದ್ದಾರೆ.
ಇನ್ನು ಆಂಜನೇಯನ ಬಗ್ಗೆ ಮಾತನಾಡಿರುವ ಭರತ್ ನಾನು ಸಾಯುವವರೆಗೂ ಹನುಮಾನ್ ಚಾಲೀಸಾ ಹೇಳುತ್ತೇನೆ. ನಾನು ಎಂದಿಗೂ ನಾನ್‌ವೆಜ್ ತಿನ್ನುವುದಿಲ್ಲ. ಹನುಮಾನ್ ಚಾಲೀಸಾ ಹೇಳಲು ಶುರು ಮಾಡಿದ ನಂತರ, ಹಣ ಹೆಚ್ಚು ಉಳಿತಾಯವಾಗುತ್ತಿದೆ. ಆರೋಗ್ಯ ಸುಧಾರಿಸಿದೆ. ವ್ಯಾಯಾಮ ಮಾಡಲು ಖುಷಿಯಾಗುತ್ತದೆ. ಮಾನಸಿಕವಾಗಿ ನೆಮ್ಮದಿ ಇದೆ. ಮೆಯ ವಾತಾವರಣ ಕೂಡ ಚೆನ್ನಾಗಿದೆ ಎಂದು ಹೇಳುತ್ತಾರೆ ಭರತ್. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

