Friday, November 28, 2025

Latest Posts

Tumakuru News: ಸರ್ವ ದಾರ್ಶನಿಕರ ಜಯಂತಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರ ತೀವ್ರ ವಿರೋಧ

- Advertisement -

Tumakuru News: ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಾಡಿದ್ದು ನಡೆಯಲಿರುವ ಸರ್ವ ದಾರ್ಶನಿಕರ ಜಯಂತಿ ಕಾರ್ಯಕ್ರಮದ ಹಿನ್ನೆಲೆ ತಾಲೂಕಿನ ಕಾಂಗ್ರೆಸ್ ನಾಯಕರು ಸರ್ಕಾರದ ಮೇಲೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಿನಾಂಕ 26ರಂದು ಆಯೋಜನೆಯಾಗಿರುವ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿರುವ ಪ್ರೋಟೋಕಾಲ್‌ಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಈ ಕಾರ್ಯಕ್ರಮ ಅವಶ್ಯಕತೆ ಇರಲಿಲ್ಲ ಈ ಕಾರ್ಯಕ್ರಮಕ್ಕೆ ಖರ್ಚಾಗುವ ಹಣ ಯಾವುದು ಎಲ್ಲಿಂದ ಬಂತು ಇದರ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಅಧಿಕಾರಿಗಳನ್ನು ಅವರ ಪಾಡಿಗೆ ಅವರನ್ನು ಕೆಲಸ ಮಾಡಲು ಬಿಡದೆ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಳ್ಳುತ್ತಿರುವುದು ಎಷ್ಟು ಸರಿ ಇದಕ್ಕೆ ಶಾಸಕರು ಉತ್ತರ ನೀಡಬೇಕು. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ವಹಿಸಬೇಕಾದ ಕಾರ್ಯಕ್ಕೆ ರಾಜಕೀಯ ಬಣ್ಣ ತುಂಬುವ ಕೆಲಸ ನಡೆದಿದೆ ಎಂದು ನಾಯಕರು ವಿಷಾದ ವ್ಯಕ್ತಪಡಿಸಿದರು.

ಆಹ್ವಾನ ಪತ್ರಿಕೆಯಲ್ಲಿ ಕೆಲವರ ಹೆಸರನ್ನು ಅವರ ಅನುಮತಿ ಪಡೆಯದೇ ಮುದ್ರಿಸಿರುವುದು ಕಾಂಗ್ರೆಸ್ ನಾಯಕರ ಕೆಂಡಾಮಂಡಲಕ್ಕೆ ಕಾರಣವಾಗಿದೆ. ಜೆಡಿಎಸ್ ಮುಖಂಡರ ಸಾನ್ನಿಧ್ಯವಿರುವ ಕಾರ್ಯಕ್ರಮವಾಗಿದ್ದರೂ “ಪಕ್ಷಾತೀತ” ಎಂದು ಹೇಳಿಕೊಳ್ಳುತ್ತಿರುವ ಆಯೋಜಕರು ತಾಲೂಕಿನ ಎಲ್ಲಾ ಸಮುದಾಯದ ನಾಯಕರನ್ನು ಗೌರವಪೂರ್ಣವಾಗಿ ಆಹ್ವಾನಿಸುತ್ತಾರೆಂಬ ಸಾಮಾನ್ಯ ನಿರೀಕ್ಷೆ ಪೂರ್ತಿಯಾಗಿಲ್ಲ ಎಂದು ಅವರು ಹೇಳಿದರು.

“ಈ ಕಾರ್ಯಕ್ರಮವನ್ನು ತಾಲ್ಲೂಕಿನ ಸಮಸ್ತ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡಂತೆ ಆಯೋಜಿಸಬೇಕಾಗಿತ್ತು. ಆದರೆ, ತಮ್ಮ ನಿಕಟ ವಲಯದ ಕೆಲವರನ್ನಷ್ಟೇ ಪರಿಗಣಿಸಿ ಆಹ್ವಾನ ನೀಡಿರುವುದು ಅತ್ಯಂತ ಅನೈತಿಕ,” ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಇದಲ್ಲದೆ, ಕಾರ್ಯಕ್ರಮದ ಅನುಮತಿ ಪ್ರಕ್ರಿಯೆ, ಯೋಜನೆ ಹಾಗೂ ಅಧಿಕಾರಿಗಳ ಭಾಗವಹಿಸುವಿಕೆ ವಿಷಯದಲ್ಲಿ ಸಂಘಟಕರು ಗೊಂದಲ ಸೃಷ್ಟಿಸುವ ರೀತಿಯಲ್ಲಿ ನಡೆದುಕೊಂಡಿದೆ, ಇದರಿಂದ ಸಾರ್ವಜನಿಕ ವಲಯದಲ್ಲಿ ಅನಾವಶ್ಯಕ ಉದ್ವಿಗ್ನತೆ ಉಂಟಾಗಿದೆ ಎಂದು ಅವರು ಆರೋಪಿಸಿದರು.

ಪಟ್ಟಣದ ಮಾಜಿ ಶಾಸಕ ಕೆ ಎಸ್ ಕಿರಣ್ ಕುಮಾರ್ ಜನ ಸಂಪರ್ಕ ಕಚೇರಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಡಿ. ಚಂದ್ರಶೇಖರ್, ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ. ಚಿಕ್ಕಣ್ಣ, ಬೇವಿನಹಳ್ಳಿ ಚೆನ್ನಬಸವಯ್ಯ, ಮೂರ್ತಿ ಕೃಷ್ಣೇಗೌಡರು, ಸೈಯದ್ ನೂರಿ ಸೇರಿದಂತೆ ಅನೇಕ ನಾಯಕರ ಉಪಸ್ಥಿತಿ ಕಂಡುಬಂತು.

ಕಾಂಗ್ರೆಸ್ ನಾಯಕರು ಈ ವಿಷಯವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು, ಮುಂದಿನ ದಿನಗಳಲ್ಲಿ ಇಂತಹ ಏಕಪಕ್ಷೀಯ ಮತ್ತು ಪ್ರೋಟೋಕಾಲ್‌ ಉಲ್ಲಂಘನೆಯ ಕ್ರಮಗಳು ಮರುಕಳಿಸದಂತೆ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

- Advertisement -

Latest Posts

Don't Miss