Health Tips: ನಾವು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು..? ಎಂಥ ಆಹಾರ ಸೇವನೆಯಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ ನಾವು 7 ರೀತಿಯ ಆಹಾರಗಳನ್ನು ಸೇವಿಸಬೇಕು. ಆಗ ನಮ್ಮ ಆರೋಗ್ಯ ವೃದ್ಧಿಸುತ್ತದೆ.
ವೈದ್ಯರಾಗಿರುವ ಡಾ.ಪ್ರಕಾಶ್.ಸಿ.ರಾವ್ ಎಂಬುವರು ಈ ಬಗ್ಗೆ ವಿವರಿಸಿದ್ದು, ಯಾವ ಆಹಾರ ಸಮತೋಲನವಾಗಿರುತ್ತದೆಯೋ ಅದೇ ಉತ್ತಮ ಆಹಾರ. ವಿಟಮಿನ್ಸ್, ಮಿನರಲ್ಸ್, ಫ್ಯಾಟ್, ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್, ಫೈಬರ್ ಮತ್ತು ನೀರಿನಂಶ ಇರುವ ಆಹಾರಗಳು ಆರೋಗ್ಯಕರ ಆಹಾರವೆನ್ನಿಸಿದೆ.
ಇವೆಲ್ಲವೂ ಸರಿಯಾದ ಪ್ರಮಾಣದಲ್ಲಿ ಇದ್ದರೆ ಅಂಥ ಆಹಾರ ಉತ್ತಮ ಆಹಾರವಾಗಿರುತ್ತದೆ. ಇಂಥ ಆಹಾರ ದೇಹದ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೇ, ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ಅಕ್ಕಿ, ಗೋಧಿ, ರಾಗಿ, ಜೋಳ, ಮಿಲೇಟ್ಸ್ ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಇರುತ್ತದೆ. ಈ ಆಹಾರಗಳು ಸಹ ನಮ್ಮ ದಿನಚರಿಯಲ್ಲಿ ಸ್ವಲ್ಪವಾದರೂ ಇರಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

