Thursday, November 27, 2025

Latest Posts

Health Tips: ಸೆಲ್ಫ್ ಮೆಡಿಕೇಶನ್ ಡೇಂಜರಸ್ :ಅದರಿಂದ BP, Sugar ಬರುತ್ತೆ?

- Advertisement -

Health Tips: ಸೆಲ್ಪ್ ಮೆಡಿಕೇಶನ್ ಅಂದ್ರೆ ನಾವಾಗಿಯೇ ಮನೆಯಲ್ಲಿ ಮದ್ದು ಮಾಡೋದು. ಎಂದೋ ನೀಡಿದ ಔಷಧಿಯನ್ನು ಬೇರೆ ಸಮಯದಲ್ಲಿ ತೆಗೆದುಕ“ಳ್ಳುವುದನ್ನೇ ಸೆಲ್ಫ್ ಮೆಡಿಕೇಷನ್ ಎನ್ನುತ್ತಾರೆ. ಸೆಲ್ಫ್ ಮೆಡಿಕೇಶನ್ ಸರಿಯೋ, ತಪ್ಪೋ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.

ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಸೆಲ್ಫ್ ಮೆಡಿಕೇಶನ್ ಡೇಂಜರ್ ಎಂದಿದ್ದಾರೆ. ಯಾರದ್ದೋ ಮಾತು ಕೇಳಿ, ಅಥವಾ ಈ ಮುಂಚೆ ನೀಡಿದ್ದ ಮದ್ದನ್ನು ತಾವೇ ನಿರ್ಧರಿಸಿ ಸೇವಿಸುವುದು, ಗೂಗಲ್‌ನಲ್ಲಿ ಸರ್ಚ್ ಮಾಡಿ ಮದ್ದು ತೆಗೆದುಕ“ಳ್ಳುವುದೆಲ್ಲ ಜೀವಕ್ಕೆ ಸಂಚಕಾರ ತಂದುಕ“ಂಡಂತೆ ಅಂತಾರೆ ವೈದ್ಯರು.

ಏಕೆಂದರೆ ನೀವೇ ನಿರ್ಧರಿಸಿ ಮಾತ್ರೆ ಸೇವಿಸಿದರೆ, ನಿಮಗೆ ಬೇರೆ ಬೇರೆ ಖಾಯಿಲೆಗಳು ಕೂಡ ಉದ್ಭವಿಸಬಹುದು. ಬಿಪಿ, ಶುಗರ್ ಶುರುವಾಗಬಹುದು. ಹಾಗಾಗಿ ಮನೆಯಲ್ಲೇ ನೀವೇ ನಿರ್ಧರಿಸಿ, ಮಾತ್ರೆ ಸೇವಿಸುವ ಬದಲು, ವೈದ್ಯರ ಬಳಿ ಹೋಗಿ ಪರೀಕ್ಷಿಸಿ, ಮಾತ್ರೆ ಸೇವಿಸಬೇಕು ಅಂತಾರೆ ವೈದ್ಯರು.

ಇನ್ನು ಜನರಿಕ್ ಔಷಧಿ ಬಗ್ಗೆ ಮಾತನಾಡಿರುವ ವೈದ್ಯರು, ಜನೌಷಧಿಯಲ್ಲಿ ಸಿಗುವ ಮಾತ್ರೆ, ಔಷಧಿಗಳ ಸೇವನೆ ಮಾಡಬಹುದಾಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅವರು, ಖಂಡಿತವಾಗಿಯೂ ಮಾಡಬಹುದು. ಎಲ್ಲ ಔಷಧಿಗಳು ಸೇಮ್. ಆದರೆ ಕೆಲವು ಔಷಧಿಗಳಿಗೆ ಬ್ರ್ಯಾಂಡ್ ಇರುತ್ತದೆ. ಹಾಗಾಗಿ ಅದಕ್ಕೆ ಬೆಲೆ ಹೆಚ್ಚಾಗಿರುತ್ತದೆ. ಆದರೆ ಜನರಿಕ್ ಔಷಧಿಗಳಿಗೆ ಬ್ರ್ಯಾಂಡ್ ಇರುವುದಿಲ್ಲ. ಹಾಗಂತ ಅವರು ಹಾನಿಕಾರಕವಲ್ಲ. ನೀವು ಅಂಥ ಮಾತ್ರೆಗಳ ಸೇವನೆ ಮಾಡಬಹುದು ಅಂತಾರೆ ವೈದ್ಯರು.

- Advertisement -

Latest Posts

Don't Miss