Health Tips: ಮುಂಚೆ ಎಲ್ಲ ಜ್ವರ, ನೆಗಡಿ ಅಥವಾ ಯಾವುದೇ ಖಾಯಿಲೆ ಬಂದರೆ ಮನೆ ಮದ್ದು ಮಾಡಿ, ಯಾವುದಕ್ಕೂ ಗುಣವಾಗದಿದ್ದಾಗ ಮಾತ್ರ, ವೈದ್ಯರ ಬಳಿ ಹೋಗುತ್ತಿದ್ದರು. ಅದನ್ನು ಸ್ವಚಿಕಿತ್ಸೆ ಎನ್ನುತ್ತಾರೆ. ಅಂದರೆ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕ“ಳ್ಳುವುದು. ಹಾಗಾದ್ರೆ ಸ್ವಚಿಕಿತ್ಸೆ ಉತ್ತಮ ಹೌದೋ, ಅಲ್ಲವೋ ಅನ್ನೋ ಬಗ್ಗೆ ವೈದ್ಯರಾಗಿರುವ ಡಾ. ಪ್ರಕಾಶ್ ರಾವ್ ಅವರೇ ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ, ನಾವು ಮನೆ ಮದ್ದು ಮಾಡಿದರೂ 1 ದಿನದಲ್ಲಿ ರೋಗ ನಿವಾರಣೆಯಾಗದಿದ್ದಲ್ಲಿ, ವೈದ್ಯರ ಬಳಿ ಪರೀಕ್ಷಿಸಿಕ“ಳ್ಳಲು ಹೋಗಬೇಕು. ಏಕೆಂದರೆ, ವೈದ್ಯರು ರೋಗ ಯಾಕೆ ಬಂದಿದೆ..? ಅದ್ಕೇನು ಮಾಡಬೇಕು..? ಅದು ಮುಂದುವರೆದು ರೋಗ ಉಲ್ಬಣಿಸಬಾರದು ಅಂದ್ರೆ ಏನು ಮಾಡಬೇಕು..? ಹೀಗೆ ಅನೇಕ ಸಮಸ್ಯೆಗಳಿಗೆ ಬೇಗ ಪರಿಹಾರ ನೀಡುತ್ತಾರೆ.
ಅಲ್ಲದೇ, ನಾವು ಹಣ ಖರ್ಚಾಗುತ್ತದೆ ಅಂತಲೋ, ಅಥವಾ ವೈದ್ಯರ ಬಳಿ ಹೋಗಲು ಉದಾಸೀನ ಆಗುತ್ತದೆ ಅಂತಲೋ, ನಾವು ನಮ್ಮ ರೋಗವನ್ನು ನಿರ್ಲಕ್ಷಿಸಿದರೆ, ಅದು ಮುಂದೆ ಹೆಚ್ಚಾಗಿ, ನಿಮ್ಮ ಪ್ರಾಣಕ್ಕೆ ಕುತ್ತು ಬರಬಹುದು. ಹಾಗಾಗಿ ಸ್ವಚಿಕಿತ್ಸೆಯಿಂದ ಸಾಧ್ಯವಾದಷ್ಟು ದೂರವಿರಿ ಅಂತಾರೆ ವೈದ್ಯರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

