ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ರೋಚಕ ಹಂತ ತಲುಪಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಹಲವು ಮಾತುಕತೆ ನಡೆಸಿದರೂ, ನಾಯಕರ ನಡುವಿನ ಪ್ರತಿಸ್ಪರ್ಧೆಗೆ ಅಂತ್ಯ ಕಂಡಿಲ್ಲ. ಈಗ ಬಿಕ್ಕಟ್ಟು ನೇರವಾಗಿ ರಾಹುಲ್ ಗಾಂಧಿ ಅಂಗಳ ತಲುಪಿದ್ದು, ನಿರ್ಣಾಯಕ ಚರ್ಚೆಗೆ ಮುಹೂರ್ತ ನಿಗದಿಯಾಗಿದೆ.
ಸದ್ಯ ಕುರ್ಚಿ ಕದನಕ್ಕೆ ಹೊಸ ತಿರುವು ಸಿಕ್ಕಿದೆ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಡಿಕೆಶಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಹೀಗಿರೋವಾಗ ಬೆಂಗಳೂರಿಗೆ ಮತ್ತೊಬ್ಬ ವ್ಯಕ್ತಿ ದೌಡಾಯಿಸಿದ್ದಾರೆ. ಆ ವ್ಯಕ್ತಿ ಬಂದ್ರು ಡಿಕೆಶಿಗೆ ಗುಡ್ ನ್ಯೂಸ್. ಹಾಗಾದ್ರೆ ಆ ವ್ಯಕ್ತಿ ಯಾರು ಗೊತ್ತಾ?
ಬೇರಾರು ಅಲ್ಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್. ದೆಹಲಿಯಿಂದ ದಿಢೀರ್ ಆಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇವತ್ತಿನ ದಿನ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿರುವ ಸಾಧ್ಯತೆ ಇದೆ.ಸಿಎಂ ಸಿದ್ಧರಾಮಯ್ಯ–ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ನಾಯಕತ್ವ ಬಿಕ್ಕಟ್ಟು ತೀವ್ರಗೊಂಡಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಏನಾಗ್ತಿದೆ ಅಂತನೇ ಊಹಿಸೋಕಾಗ್ತಿಲ್ಲ. ಒಂದ್ಕಡೆ ಅಧಿಕಾರದ ಚಮತ್ಕಾರ ಭೇದಿಸಲು ಡಿಸಿಎಂ ಡಿಕೆಶಿ ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಒತ್ತಡ ರಾಜಕೀಯ ನಡೆಸ್ತಿದ್ದಾರೆ. ದಿಲ್ಲಿಯಲ್ಲೇ ಬಿಡಾರ ಹೂಡಿರೋ ಡಿಕೆ ಬಣ ಪವರ್ ಪಾಲಿಟಿಕ್ಸ್ಗೆ ಕಡ್ಡಿ ಗೀರಿದೆ. ಡಿಕೆಶಿ ಪಾಳಯ ದೆಹಲಿಯಲ್ಲೇ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿಸುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಭದ್ರಕೋಟೆಯಾಗಿದ್ದಾರೆ.
ಇಬ್ಬರ ನಡುವಿನ ಬಣಪಡೆಗಳ ಪೈಪೋಟಿ ಹೈಕಮಾಂಡ್‌ಗೆ ತಲೆನೋವಾಗಿದೆ. ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದಲ್ಲಿ ಸಂಕಷ್ಟವಿರುವ ಸಂದರ್ಭದಲ್ಲಿ, ಕರ್ನಾಟಕ ಮಾತ್ರ ಶಕ್ತಿಯ ಕೇಂದ್ರವಾಗಿರುವುದರಿಂದ ಎಲ್ಲ ಕೆಡೆಗಳಿಂದಲೂ ಲೆಕ್ಕಾಚಾರ ಹಾಕಿ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಹೈಕಮಾಂಡ್‌ನಲ್ಲಿ ಮೂಡಿದೆ.
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಖರ್ಗೆ, ಸಿಎಂ ಮತ್ತು ಡಿಸಿಎಂ ಬಣಗಳ ಆರೋಪ–ಪ್ರತ್ಯಾರೋಪಗಳ ಬಗ್ಗೆ ವಿವರವಾದ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಇಂದು ಖರ್ಗೆ ದೆಹಲಿಗೆ ಹಿಂತಿರುಗಿದ್ದಾರೆ. ಅಲ್ಲಿ ಅವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಸಂಗ್ರಹಿಸಿದ ವರದಿ ಸಲ್ಲಿಸುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ

