- Advertisement -
Mandya News: ಮಂಡ್ಯ: ಮಂಡ್ಯದಲ್ಲಿ ಓರ್ವ ಯುವಕ ತಾನು ಕುಡಿತ ಬಿಟ್ಟ ಖುಷಿಗೆ, ಊರಿನ ಜನರಿಗೆ ಕೋಳಿ ಹಂಚಿ ಖುಷಿ ಪಟ್ಟಿದ್ದಾನೆ.
ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಿರಣ್ ಎಂಬಾತನೇ ಕುಡಿತ ಬಿಟ್ಟ ಖುಷಿಗೆ ಕೋಳಿ ಹಂಚಿರೊ ಯುವಕನಾಗಿದ್ದಾನೆ. ಈತನಿಗೆ ಹಲವು ವರ್ಷಗಳಿಂದ ಕುಡಿಯುವ ದುರಭ್ಯಾಸವಿತ್ತು. ಆದ್ರೆ ಕುಡಿತದ ಚಟದಿಂದ ಬೇಸತ್ತ ಈತ ಅದರಿಂದ ಹೊರ ಬರಲು ನಿರ್ಧರಿಸಿದ್ದ. ಅದರಂತೆ ಕುಡಿತ ಬಿಟ್ಟ ಖುಷಿ ಜೊತೆಗೆ ತನ್ನ ಹುಟ್ಟು ಹಬ್ಬದ ಅಂಗವಾಗಿ ತನ್ನ ಏರಿಯಾದ ಜನರಿಗೆ ಮನೆಗೊಂದು ಕೋಳಿ ಹಂಚಿ ಸಂಭ್ರಮಿಸಿದ್ದಾನೆ.
ಕೋಳಿ ಹಂಚಿಕೆ ಮಾಡಿ ವಿಶೇಷ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಕಿರಣ್ ರ ವರೆಗೆ ಊರಿನ ಜನತೆ ಶುಭ ಹಾರೈಸಿದ್ದಾರೆ.
- Advertisement -

