Wednesday, November 26, 2025

Latest Posts

ಧರ್ಮಧ್ವಜ ದಿವ್ಯಾರೋಹಣ : ಮೋದಿಯಿಂದ ಭಾವುಕ ಸಂದೇಶ

- Advertisement -

ಅಯೋಧ್ಯೆಯ ಪವಿತ್ರ ಭೂಮಿಯಲ್ಲಿ ಇಂದು ಐತಿಹಾಸಿಕ ಘಟನೆ ನಡೆದಿದೆ. ಸಾವಿರಾರು ವರ್ಷಗಳ ಸಂಸ್ಕೃತಿ, ಭಕ್ತಿ ಮತ್ತು ತ್ಯಾಗದ ಸಂಕೇತವಾದ ಧರ್ಮಧ್ವಜ ದಿವ್ಯವಾಗಿ ಅರಳಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಇದು ಕೇವಲ ಧ್ವಜವಲ್ಲ; ಕೋಟ್ಯಂತರ ರಾಮಭಕ್ತರ ಸಂಕಲ್ಪ, ಸತ್ಯ ಮತ್ತು ಧರ್ಮದ ಪ್ರತೀಕ ಎಂದು ಭಾವೋದ್ವೇಗದಿಂದ ಹೇಳಿದರು. ಇಡೀ ಭಾರತ, ಇಡೀ ವಿಶ್ವ ರಾಮಮಯವಾಗಿದೆ. ಮಾನವತೆಯ ದಾರಿದೀಪ ಈ ಧರ್ಮಧ್ವಜ ಎಂದು ಹೇಳಿದರು. ಮೋದಿ ಧ್ವಜದ ಪ್ರತಿಯೊಂದು ಅಂಶ ರಾಮರಾಜ್ಯದ ತತ್ವಗಳನ್ನು— ಸಂಕಲ್ಪ, ನಂಬಿಕೆ, ತ್ಯಾಗ, ಸಾಧನೆ, ಒಗ್ಗಟ್ಟು— ಸ್ಮರಿಸುತ್ತವೆ ಎಂದು ವಿವರಿಸಿದರು.

ಪಂಚಶತಮಾನಗಳ ಆತಂಕಕ್ಕೆ ಇಂದು ಶಾಂತಿ ಸಿಕ್ಕಿದೆ. ರಾಮನ ಹೆಸರಿನಲ್ಲಿ ವಿಭಜನೆ ಬೇಡ, ನ್ಯಾಯ ಮತ್ತು ನೈತಿಕತೆ ನಮ್ಮ ದಾರಿ ಎಂದರು. ಅಯೋಧ್ಯೆಯ ಪವಿತ್ರತೆ, ಶಬರಿಯ ಮಮತೆ, ಹನುಮಂತನ ಸಮರ್ಪಣೆ, ಜಟಾಯುವಿನ ತ್ಯಾಗ, ವಾಲ್ಮೀಕಿಯ ಮಾರ್ಗದರ್ಶನ ಇವುಗಳನ್ನೆಲ್ಲ ಪ್ರಧಾನಿ ಸ್ಮರಿಸಿದರು. ರಾಮಕಥೆಯ ಪ್ರತಿಯೊಂದು ಸ್ಮೃತಿ ಇಂದು ನಿರ್ಮಿತ ರಾಮಮಂದಿರದ ಕಲ್ಲಿನಲ್ಲಿ ಸ್ಪಂದಿಸುತ್ತಿದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿ, ಲೋಕತಂತ್ರ ಮತ್ತು ಮಹನೀಯರ ಮಾರ್ಗದರ್ಶನದ ಬಗ್ಗೆ ಮಾತಾಡಿದ ಮೋದಿ, ವಿಕಸಿತ ಭಾರತ 2047 ಗುರಿ ಸಾಧನೆಗಾಗಿ ಎಲ್ಲರೂ ಒಂದಾಗಿ ನಡೆಬೇಕೆಂದು ಕರೆ ನೀಡಿದರು. ಧರ್ಮಧ್ವಜವು ಭವಿಷ್ಯದ ಪೀಳಿಗೆಗೆ ಕರ್ತವ್ಯದ ಪಾಠ. ನಮ್ಮ ನಡೆ-ಮಾತು ರಾಮನ ಆದರ್ಶವನ್ನು ಪ್ರತಿಬಿಂಬಿಸಲಿ ಎಂದು ಅವರು ಕೊನೆಗೊಳಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss