Friday, November 28, 2025

Latest Posts

Tumakuru News: ದಲಿತ ಸಂಘಟನೆಗಳ ಪ್ರತಿಭಟನೆ: ಡಾ.ಜಿ.ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡುವಂತೆ ಆಗ್ರಹ

- Advertisement -

Tumakuru News: ತುಮಕೂರು: ದಲಿತ ಸಿಎಂ ಕೂಗು ಹೆಚ್ಚಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ಮಂಡ್ಯದಲ್ಲಿ ದಲಿತ ಸಿಎಂ ಆಗಬೇಕು ಎಂದು ಆಗ್ರಹಿಸಿ, ಸಭೆ ನಡೆಸಿದ್ದರು. ಇಂದು ತುಮಕೂರಿನಲ್ಲೂ ದಲಿತ ಸಿಎಂ ಕೂಗು ಕೇಳಿಬಂದಿದೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.ದಲಿತ ಸಂಘಟನೆಗಳು ಈ ಪ್ರತಿಭಟನೆ ನಡೆಸಿದ್ದು, ಡಾ.ಜಿ.ಪರಮೇಶ್ವರ್‌ಗೆ ಸಿಎಂ ಸ್ಥಾನ ನೀಡುವಂತೆ ಆಗ್ರಹಿಸಲಾಯಿತು.

ದಲಿತ ಮುಖಂಡ ರಾಮಯ್ಯ, ಬಂಡೆಕುಮಾರ್, ಭಾನುಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಡಾ ಜಿ ಪರಮೇಶ್ವರ್ ಎರಡು ಭಾರಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ.ತುಮಕೂರು ಜಿಲ್ಲೆಗೆ ಸಿಎಂ ಸ್ಥಾನ ಇದುವರೆಗೂ ಕೊಟ್ಟಿಲ್ಲ. ಹಾಗಾಗಿ ಡಾ.ಜಿ‌.ಪರಮೇಶ್ವರ್ ಅವರನ್ನ ಸಿಎಂ ಮಾಡುವಂತೆ ಹೈಕಮಾಂಡ್ ಗೆ ಒತ್ತಾಯಿಸಲಾಗಿದೆ.

- Advertisement -

Latest Posts

Don't Miss