Friday, November 28, 2025

Latest Posts

ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ: ಕನಕೇನಹಳ್ಳಿ ಕೃಷ್ಣಪ್ಪ

- Advertisement -

Tipaturu: ತಿಪಟೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಡಿಸೆಂಬರ್ 11 2025 ರಂದು ಮೈಸೂರು ಚಲೋ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದುಕರ್ನಾಟಕ ಬಹುಜನ ಚಳುವಳಿ ರಾಜ್ಯಾಧ್ಯಕ್ಷರಾದ ಕನಕೇನಹಳ್ಳಿ ಕೃಷ್ಣಪ್ಪನವರು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳ ತವರಾದ ಸಿದ್ದರಾಮಯ್ಯನ ಹುಂಡಿಯಿಂದ ಕಾಲ್ನಡಿಗೆ ಜಾತ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದಿನಾಂಕ 1/8/24 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಇಂದಿಗೆ 14 ತಿಂಗಳು ನಡೆಯುತ್ತಿದೆ. ಇದುವರೆಗೆ ಕೆಲ ರಾಜ್ಯಗಳಾದ ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಒಳಮೀಸಲಾಗಿ ಜಾರಿ ಮಾಡಿ ಮೂರು ತಿಂಗಳು ಕಳೆದು ತಮ್ಮ ಆಡಳಿತಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸಿವೆ.

ಆದರೆ ಆಗಸ್ಟ್ 2025ರ ವರೆಗೆ ಕರ್ನಾಟಕ ರಾಜ್ಯ ಸರಕಾರ ಒಳ ಮೀಸಲಾತಿ ವಿಷಯದಲ್ಲಿ ಇನ್ನೂ ಮೀನ ಬೇಸ ಮಾಡುತ್ತಿದ್ದು ಸರಕಾರದ ಈ ವಿಳಂಬ ಧೋರಣೆಯನ್ನ ಖಂಡಿಸುತ್ತಾ,ಎಚ್ ಎನ್ ನಾಗಮೋಹನ ದಾಸ್ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಎರಡನೇ ಹಂತದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ, ಅಹೋ ರಾತ್ರಿ ಅನಿದೃಷ್ಟಾವಧಿ ಹೋರಾಟದ ಒತ್ತಡಕ್ಕೆ ಮಣಿದ ಸರಕಾರ ದಿನಾಂಕ 19/ 8 /2018 ರದ್ದು ವಿಶೇಷ ಸಚಿವ ಸಂಪುಟದಲ್ಲಿ ಮಾದಿಗ ಸಮಾಜದ ಜಾತಿಗಳಿಗೆ ಶೇಕಡ 6% ಮೀಸಲಾತಿ ಅನ್ನು ಹಂಚಿಕೆ ಮಾಡಲು ತೀರ್ಮಾನಿಸಿ ಆದೇಶವನ್ನು ಹೊರಡಿಸಿತು ಎಂದರು.

ಆದರೆ ಹೋರಾಟಗಾರರು ಮುಂದಿಟ್ಟ ಎಂಟು ಹಕ್ಕೊತ್ತಾಯಗಳನ್ನು ಹತ್ತು ದಿನಗಳಲ್ಲಿ ಪೂರ್ಣ ಪ್ರಮಾಣದ ಮೀಸಲಾತಿ ಜಾರಿಗೊಳಿಸಲು ಕಾಲಾವಕಾಶ ನೀಡಲಾಯಿತು. ಸಮಾಜ ಕಲ್ಯಾಣ ಸಚಿವರು ಇಲ್ಲಿವರೆಗೆ ಯಾವ ಕ್ರಮ ಕೈಗೊಳ್ಳದೆ ದುರುದ್ದೇಶದಿಂದ ಒಳ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡದೆ ವಿಳಂಬ ಧೋರಣೆ ಮಾಡುತ್ತಿದ್ದಾರೆ.

ಹಾಗಾಗಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಡಿಸೆಂಬರ್ 6 /12/25 ರಂದು ಮುಖ್ಯಮಂತ್ರಿಗಳ ಸ್ವಗ್ರಾಮವಾದ ಸಿದ್ದರಾಮಯ್ಯನ ಹುಂಡಿ ಗ್ರಾಮದಿಂದ ಮೈಸೂರಿಗೆ ಒಳ ಮೀಸಲಾತಿ ಜಾರಿಗಾಗಿ ಮೈಸೂರಿನಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬಹುಜನ ಚಳುವಳಿ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ ಚಿಕ್ಕಬಿದ್ದರೆ, ನರಸಾಪುರ ಕಿರಣ್.ಪ್ರಧಾನ ಕಾರ್ಯದರ್ಶಿ ಕರಿಕೆರೆ ಉಮೇಶ್, ಜಿ ಟಿ ನರಸಿಂಹಮೂರ್ತಿ, ಖಜಾಂಚಿ ಬಸವರಾಜ್, ಮಂಜುನಾಥ್ ಮಡೇನೂರು, ಚಂದ್ರಶೇಖರ್, ಮಾರ್ಗನಹಳ್ಳಿ ರಂಗಸ್ವಾಮಿ, ಹರೀಶ್, ಕಾಂತರಾಜು, ಶಾಂತಕುಮಾರ್ ಆರ್ ಜಿ ಬಿ.ರಂಗಪುರ, ಶಿವಯ್ಯ, ಸತೀಶ್, ವಸಂತ್ ಕುಮಾರ್ , ಕೆಂಚಪ್ಪ, ರವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

- Advertisement -

Latest Posts

Don't Miss