Wednesday, November 26, 2025

Latest Posts

ದಲಿತ ಸಿಎಂಗೆ ಸಮಯ ಬಂದಿದೆ ಜಿ. ಪರಮೇಶ್ವರ್ ಸಿಎಂ ಆಗಬೇಕು !

- Advertisement -

ಪವರ್ ಶೇರಿಂಗ್ ಪ್ರಕ್ರಿಯೆ ನಡೆದರೆ, ದಲಿತ ಸಮುದಾಯದ ವ್ಯಕ್ತಿಗೆ ಮುಖ್ಯಮಂತ್ರಿ ಹುದ್ದೆಯ ಅವಕಾಶ ನೀಡಿದರೆ ಸಂತೋಷವಾಗುತ್ತದೆ ಎಂದು ಪಾವಗಡ ಶಾಸಕ ಹೆಚ್‌.ವಿ‌. ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಂದುವರಿದರೂ, ಡಿ.ಕೆ. ಶಿವಕುಮಾರ್ ಸಾಹೇಬರಿಗೆ ಸಿಎಂ ಸ್ಥಾನ ನೀಡಿದರೂ ಅಥವಾ ದಲಿತರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರೂ ನಮಗೆ ಸಂತೋಷ ಎಂದು ಹೇಳಿದರು.

ವೆಂಕಟೇಶ್ ಅವರು 2013ರ ಚುನಾವಣೆಯನ್ನು ನೆನೆಸಿಕೊಂಡು, ಆ ವರ್ಷ ನಾನು ಸೋತಿದ್ದೆ, ಜಿ. ಪರಮೇಶ್ವರ್ ಕೂಡ ಸೋತಿದ್ದರು. ಪರಮೇಶ್ವರ್ ಗೆದ್ದಿದ್ದರೆ ಅವರು ಸಿಎಂ ಕುರ್ಚಿಯಲ್ಲಿ ಕುಳಿತಿರುತ್ತಿದ್ದರು ಎಂದು ಹೇಳಿದರು. ಇದೀಗ ಪರಮೇಶ್ವರ್ ಸಾಹೇಬರು ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಆಸೆ. ಹೈಕಮಾಂಡ್‌ಗೆ ಈ ಮೂಲಕ ನನ್ನ ಮನವಿಯನ್ನು ಸಲ್ಲಿಸುತ್ತೇನೆ. ಯಾವುದೇ ನಿರ್ಧಾರ ಬಂದರೂ ಹೈಕಮಾಂಡ್ ತೀರ್ಪಿಗೆ ನಾನು ಬದ್ಧ ಎಂದು ಸ್ಪಷ್ಟಪಡಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss