Wednesday, November 26, 2025

Latest Posts

ಮೊದಲು ಜಿ.ಪರಮೇಶ್ವರ್ ಅವರ ಹಳೇ ಕೂಲಿ ಕ್ಲೀಯರ್ ಆಗಲಿ: ಸಿಎಂ ಕುರ್ಚಿ ಕದನದ ಬಗ್ಗೆ ಕೆ.ಎನ್.ರಾಜಣ್ಣ ಹೇಳಿಕೆ

- Advertisement -

Tumakuru News: ತುಮಕೂರು: ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು, ಕಾಂಗ್ರೆಸ್‌ನ ಕುರ್ಚಿ ಕದನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಎಲ್ಲರೂ ಚುನಾವಣೆಗೆ ಹೋಗೋಣ. ಡಿಕೆ ನೇತೃತ್ವದಲ್ಲಿ ಚುನಾವಣೆ ಹೋಗಿ, ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿ, ಬಹುಮತ ತಂದು ಆಗ ಡಿಕೆ ಶಿವಕುಮಾರ್ ಐದು ವರ್ಷ ಸಿಎಂ ಆಗಲಿ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ಎಲೆಕ್ಟ್ ಮಾಡಿದ್ದು ಯಾರು..? ಸಿಎಲ್ ಪಿ ಎಲೆಕ್ಟ್ ಮಾಡಿದ್ದು. ಈಗ ಸಿ ಎಲ್ ಪಿ ಯಲ್ಲಿ ತೀರ್ಮಾನ ಆಗಬೇಕು. ಸಿ ಎಲ್ ಪಿ ಯಲ್ಲಿ ಯಾರಾದರೂ ಸಿದ್ದರಾಮಯ್ಯ ನವರು ರಾಜೀನಾಮೆ ಕೊಡಬೇಕು ಎಂದು ಕೇಳಿದಾರಾ..? ೩೦-೩೦ ತಿಂಗಳು ಒಪ್ಪಂದ ಎಂದು ಸುಮ್ಮನೇ ಹೇಳ್ತಾರೆ. ಯಾರಾದರೂ ಬಂದು ಹೇಳೋರಿದ್ದಾರಾ..? ಹೈಕಮಾಂಡ್ ನಾಯಕತ್ವ ಬಗ್ಗೆ ಯಾರೂ ಮಾತಾಡಬಾರದು ಎಂದು ಹೇಳಿದ್ದಾರೆ. ನಾನು ಅದರ ಬಗ್ಗೆ ಮಾತಾಡಲ್ಲ ಎಂದು ರಾಜಣ್ಮ ಹೇಳಿದ್ದಾರೆ.

ನನ್ನ ವೈಯಕ್ತಿಕ ಆಶಯ ಸಿದ್ದರಾಮಯ್ಯರ ೫ ವರ್ಷ ಸಿಎಂ ಆಗಿರಬೇಕು ಎಂದು. ಒಂದು ಅಥವಾ ಎರಡು ದಿನದಲ್ಲಿ ಎಐಸಿಸಿ ಎಲ್ಲವನ್ನೂ ಕ್ಲೀಯರ್ ಮಾಡುತ್ತೆ. ಸಿದ್ದರಾಮಯ್ಯರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿದಲ್ವಾ…? ಇವರು ಅಧ್ಯಕ್ಷರು ಆಗಿರಬಹುದು. ೨೦೧೩ ರಲ್ಲಿ ಪರಮೇಶ್ವರ್ ಪಕ್ಷ ಅಧಿಕಾರಕ್ಕೆ ತಂದರು.
ಆದರೆ ಅವರು ಸೋತು ಬಿಟ್ಟರು. ಡಿಕೆ‌ಶಿ ಕೂಲಿ ಕೇಳಿದಂತೆ. ಪರಮೇಶ್ವರ್ ಕೂಡ ಕೂಲಿ ಕೇಳಬೇಕಲ್ಲ. ಮೊದಲು ಜಿ ಪರಮೇಶ್ವರ್ ಅವರ ಹಳೇ ಕೂಲಿ ಕ್ಲೀಯರ್ ಆಗಲಿ.

ನಮ್ಮ ಮೊದಲ ಆಶಯ ಸಿದ್ದರಾಮಯ್ಯರು ಸಿಎಂ ಆಗಿ ಇರಬೇಕು ಅಂತಾ. ಅನಿವಾರ್ಯತೆ ಬಂದರೆ ಪರಮೇಶ್ವರ್ ಸಿಎಂ ಆಗಲಿ ಅನ್ನೋದು ನನ್ನ ಅಭಿಪ್ರಾಯ ಎಂದು ರಾಜಣ್ಣ ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ.

- Advertisement -

Latest Posts

Don't Miss