Sandalwood: ನಟ ಬಲ ರಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಬಾಲ್ಯ, ಸಿನಿ ಜರ್ನಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಮೂಲತಃ ಮೈಸೂರಿನವರಾಗಿರುವ ಬಲ ರಜ್ವಾಡಿ ಅವರು, ಓದಿದ್ದೆಲ್ಲ ಸಿಂಗಾನಲ್ಲೂರಿನಲ್ಲಿ. ಇಬ್ಬರು ಅಣ್ಣಂದಿರ ಜತೆ ಬೆಳೆದ ಬಲ ಅವರ ತಂದೆ ಪೋಲೀಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಿಕಾಂ ಮುಗಿಸಿ, ರಂಗಭೂಮಿಗೆ ಬಂದು ತಮ್ಮ ನಟನಾ ಪಯಣ ಶುರು ಮಾಡಿದರು.
ಬಲ ಅವರ ತಾಯಿ, ಅಜ್ಜಿ ಅವರು ಚೆನ್ನಾಗಿ ಸೋಬಾನೆ ಪದಗಳನ್ನು ಹಾಡುತ್ತಿದ್ದರು. ತಂದೆ ಸಿನಿಮಾ ಪ್ರಿಯರಾಗಿದ್ದು, ಶಿವಾಜಿ ಗಣೇಶನ್ ಅವರ ಫ್ಯಾನ್ ಆಗಿದ್ದರು. ಅವರ ಸಿನಿಮಾಗಳನ್ನು ಮಕ್ಕಳಿಗೆ ತೋರಿಸುತ್ತಿದ್ದರು. ಇಂಥ ಸಿನಿಮಾ ಮತ್ತು ಅಮ್ಮನ ಸೋಬಾನೆ ಪದಗಳನ್ನು ಕೇಳಿ ಬೆಳೆದ ಬಲ ಅವರಿಗೆ ಕಲಾವಿದರಾಗಲು ಸಾಧ್ಯವಾಯಿತು.
ಇನ್ನು ಬಲ ಅವರ ಎರಡನೇಯ ಸಹೋದರ ಅವರು ಡ್ರಾಮಾ ತಂಡವನ್ನು ಸೇರಿದ್ದರು. ಅವರನ್ನು ಬಲ ಅವರೇ ಕರೆದುಕ“ಂಡು ಹೋಗುತ್ತಿದ್ದರು. ಅಣ್ಣನನ್ನು ಸೈಕಲ್ಲಿನಲ್ಲಿ ಆಡಿಟೋರಿಯಮ್‌ಗೆ ಕರೆದ“ಯ್ಯುತ್ತಿದ್ದರು. ಹಾಗಾಗೆ ಅಲ್ಲಿ ಮಾಡುವ ಡ್ರಾಮಾ, ಡೈಲಾಗ್ ಹೇಳುವುದೆಲ್ಲ ಕೇಳಿ ಕೇಳಿ, ಬಲ ಅವರಿಗೂ ಕೂಡ ಡ್ರಾಮಾದಲ್ಲಿ ಆಸಕ್ತಿ ಬೆಳೆಯಿತು. ಈ ಆಸಕ್ತಿಯೇ ಬಲ ಅವರು ಇಂದು ಅತ್ಯುತ್ತಮ ನಟನಾಗುವುದಕ್ಕೆ ನಾಂದಿಯಾಯಿತು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

