Sandalwood: ಬಲರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಕಲಾವಿದರಾಗದಿದ್ದಲ್ಲಿ ಏನಾಗುತ್ತಿದ್ದರು ಅನ್ನೋ ಬಗ್ಗೆ ಮಾತನಾಡಿದ್ದಾರೆ.
ಕಾಂತಾರ ಸಿನಿಮಾದಲ್ಲಿ ನಟಿಸಿರುವ ಬಲ್‌ರಾಜ್ವಾಡಿ ಅವರು, ಈ ಮುನ್ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕಾಂತಾರದಿಂದ ಅವರು ಇನ್ನೂ ಪ್ರಸಿದ್ಧರಾದರು. ಬಾಲ್‌ರಾಜ್ ಅವರ ತಂದೆ ಪೋಲೀಸ್ ಆಗಿದ್ದರು. ಹಾಗಾಗಿ ಬಾಲ್‌ರಾಜ್ ಅವರು ಕೂಡ ಕೆಲವು ಬಾರಿ ಪೋಲೀಸ್ ಆಗುವ ಆಸೆ ವ್ಯಕ್ತಪಡಿಸಿದ್ದರು. ಆದರೆ ಅಪ್ಪನೇ ಈ ಕೆಲಸ ಬೇಡಾ ಅಂತಾ ಹೇಳಿದ್ದರಂತೆ. ಹಾಗಾಗಿ ಬಾಲ್‌ರಾಜ್ ಸಿನಿಮಾ ಆರಿಸಿಕ“ಂಡರು.
ಇನ್ನು ಪಾತ್ರಗಳ ಆಯ್ಕೆ ಬಗ್ಗೆ ಮಾತನಾಡಿರುವ ಬಾಲ್‌ರಾಜ್, ನಾನು ಸಿನಿಮಾದಲ್ಲಿ ವಿಲನ್ ಅಪ್ಪ, ಹಿರೋಯಿನ್ ಅಪ್ಪ, ವಿಲನ್, ಉತ್ತಮನ ಪಾತ್ರ ಹೀಗೆ ಎಲ್ಲ ರೀತಿಯ ಪಾತ್ರವನ್ನು ಮಾಡಿದ್ದೇನೆ. ಆದರೆ ವಿಲನ್ ಪಾತ್ರವೇ ಹೆಚ್ಚು ಮಾಡಿದ್ದೇನೆ. ಅದರಲ್ಲೂ ಅಪ್ಪನ ಪಾತ್ರವನ್ನೇ ಹೆಚ್ಚು ಮಾಡಿದ್ದೇನೆ ಅಂತಾರೆ ಬಾಲ್‌ರಾಜ್.
ರಂಗಭೂಮಿ ಮತ್ತು ಸಿನಿಮಾ ಬಗ್ಗೆ ಮಾತನಾಡಿರುವ ಬಲ್‌ರಾಜ್ ಅವರು, ರಂಗಭೂಮಿಯಲ್ಲಿ ಹೆಚ್ಚು ಜವಾಬ್ದಾರಿಗಳಿರುತ್ತದೆ. ಆದರೆ ಸಿನಿಮಾದಲ್ಲಿ ಅಂಥ ಜವಾಬ್ದಾರಿಗಳಿರುವುದಿಲ್ಲ. ರಂಗಭೂಮಿಯಲ್ಲಿ ಬರೀ ಅಭಿನಯ ಮಾತ್ರವಲ್ಲ. ಕಸ ಗುಡಿಸಬೇಕು, ಲೈಟ್ ಕಟ್ಟಬೇಕಾಗುತ್ತದೆ. ಟಿಕೇಟ್ ನೀಡಲು ಮನೆ ಮನೆಗೆ ಹೋಗಬೇಕಾಗುತ್ತದೆ. ಹೀಗೆ ಎಲ್ಲ ಕೆಲಸಗಳನ್ು ಮಾಡಬೇಕಾಗುತ್ತದೆ ಅಂತಾರೆ ಬಲ್‌ರಾಜ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

