- Advertisement -
Winter Special Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋದಿ ಹುಡಿ, ಬಾದಾಮಿ, ಗೇರುಬೀಜ, ದ್ರಾಕ್ಷಿ, ಪಿಸ್ತಾ, ಅಖ್ರೋಟ್, ಮಖಾನಾ, ಗೋಂದ್ (ಅಂಟು) ಎಲ್ಲವೂ 1 ಕಪ್ ಇರಲಿ. ಇದನ್ನು ಕರಿಯಲು ತುಪ್ಪ, ಮತ್ತು ಲಾಡು ಮಾಡಲು ಬೆಲ್ಲ ಬೇಕು.
ಮಾಡುವ ವಿಧಾನ: ತುಪ್ಪದಲ್ಲಿ ಎಲ್ಲ ಡ್ರೈಫ್ರೂಟ್ಸ್, ಗೋಂದ್, ಮಖಾನಾ ಎಲ್ಲವನ್ನೂ ಫ್ರೈ ಮಾಡಿ. ಬಳಿಕ ಗೋದಿ ಹುಡಿ ಕೂಡ ಹುರಿಯಿರಿ. ಹುರಿದ ಗೋದಿ ಹುಡಿ ಬದಿಗಿರಿಸಿ, ಫ್ರೈ ಮಾಡಿದ ಡ್ರೈಫ್ರೂಟ್ಸ್ ತರಿತರಿಯಾಗಿ ಪುಡಿ ಮಾಡಿ.
ಬಳಿಕ ಬೆಲ್ಲ ಪಾಕ ಬರಿಸಿ, ಅದಕ್ಕೆ ಏಲಕ್ಕಿ ಹುಡಿ ಸೇರಿಸಿ, ಅವಶ್ಯಕತೆ ಇದ್ದರೆ ಮತ್ತೆ ತುಪ್ಪ ಸೇರಿಸಿ, ಹುರಿದ ಗೋದಿ ಮತ್ತು ಪುಡಿ ಮಾಡಿದ ಮಿಶ್ರಣ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಉಂಡೆ ಕಟ್ಟಿದ್ರೆ ಚಳಿಗಾಲದ ಆರೋಗ್ಯಕರ ಲಾಡು ರೆಡಿ.
- Advertisement -

